ಬೆಂಗಳೂರು :ಅಮ್ಮ ಬೈದರೆಂದು ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್ ನಲ್ಲಿ ರಾಜ್ಯ ಸುತ್ತಿದ ಅಕ್ಕ-ತಮ್ಮ..!!

ಬೆಂಗಳೂರು :ಅಮ್ಮ ಬೈದರೆಂದು ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್ ನಲ್ಲಿ ರಾಜ್ಯ ಸುತ್ತಿದ ಅಕ್ಕ-ತಮ್ಮ..!!

ಬೆಂಗಳೂರು: ಪೋಷಕರು ಬೈದರು ಎಂದು ಮನೆಬಿಟ್ಟು ಹೋದ ಮಕ್ಕಳ ಬಗ್ಗೆ ಕೇಳಿದ್ದೇವೆ. ಸಿಲಿಕಾನ್ ಸಿಟಿ ಬೆಂಗಳೂರಿನ ಅಂತಹದ್ದೇ ಘಟನೆ ನಡೆದಿದೆ.

ಮಾರತಹಳ್ಳಿಯ ಅಶ್ವತ್ಥನಗರದಲ್ಲಿ 13 ವರ್ಷದ ಬಾಲಕಿ ಮತ್ತು ಆಕೆಯ 9 ವರ್ಷದ ತಮ್ಮನಿಗೆ ಅಮ್ಮ ‘ಟ್ಯೂಷನ್‌ಗೆ ಹೋಗಲ್ವಾ? ಓದಲ್ವ ಎಂದು ಬೈದಿದ್ದಕ್ಕೆ ಯಾರಿಗೂ ಹೇಳದೆ ಕೇಳದೆ ಮೊನ್ನೆ ಫೆಬ್ರವರಿ 1ರ ಅಪರಾಹ್ನ 3 ಗಂಟೆ ಸುಮಾರಿಗೆ ಮನೆಯಿಂದ ಹೊರಹೋಗಿದ್ದಾರೆ. ಮಕ್ಕಳು ಕಾಣಿಸದಿರುವಾದ ಗಾಬರಿಯಿಂದ ಪೋಷಕರು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆ ಬಿಟ್ಟ 13 ವರ್ಷದ ಬಾಲಕಿಯ ಬುದ್ಧಿವಂತಿಕೆ ಪೊಲೀಸರನ್ನೇ ಬೆರಗುಗೊಳಿಸಿದೆ. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದು ಬಾಲಕಿಗೆ ತಿಳಿದಿತ್ತು. ತಕ್ಷಣ ತನ್ನ ಬಳಿಯಿದ್ದ ಆಧಾರ್ ಕಾರ್ಡ್ ಹಿಡಿದುಕೊಂಡು, ತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾಳೆ. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪುಟ್ಟ ಮಕ್ಕಳು ಯಾವುದೇ ಹಣವಿಲ್ಲದೆ, ಕೇವಲ ಆಧಾರ್ ಕಾರ್ಡ್ ಬಲದಿಂದ ರಾಜಾರೋಷವಾಗಿ ಸುತ್ತಾಟ ನಡೆಸಿದ್ದಾರೆ!

ಪ್ರಕರಣ ದಾಖಲಾಗುತ್ತಿದ್ದಂತೆ ಹೆಚ್‌ಎಎಲ್ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವುದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಮಕ್ಕಳ ಫೋಟೋ ನೋಡಿದ್ದ ಚಿತ್ರದುರ್ಗದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮಕ್ಕಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

ಬಾಲಕಿಗೆ ಉಚಿತ ಪ್ರಯಾಣವಿದ್ದರೂ, 9 ವರ್ಷದ ಬಾಲಕನಿಗೆ ಟಿಕೆಟ್ ಪಡೆಯದೆ ಪ್ರಯಾಣಿಸಿರುವುದು ಬಸ್ ನಿರ್ವಾಹಕರ ಕಣ್ಣಿಗೂ ಬಿದ್ದಿಲ್ಲ. ಕಂಡಕ್ಟರ್ ಗೆ ಗೊತ್ತಾಗದೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಲ್ಲಿ ಅಕ್ಕ-ತಮ್ಮ ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article