ದೆಹಲಿ :ಅದ್ಧೂರಿ ಮದುವೆ ಬದಲು ಅದೇ ದುಡ್ಡಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲಿ ಹಸಮಣೆ ಏರಿದ ಜೋಡಿ...!!!

ದೆಹಲಿ :ಅದ್ಧೂರಿ ಮದುವೆ ಬದಲು ಅದೇ ದುಡ್ಡಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲಿ ಹಸಮಣೆ ಏರಿದ ಜೋಡಿ...!!!

ದೆಹಲಿ :ಭಾರತದಲ್ಲಿ ಮದುವೆ ಬರೀ ಸಂಪ್ರದಾಯವಲ್ಲ ಶ್ರೀಮಂತಿಕೆ ಪ್ರದರ್ಶನಕ್ಕೆ ವೇದಿಕೆ. ಕೈನಲ್ಲಿ ಹಣ ಇಲ್ಲ ಅಂದ್ರೂ ಜನ ಸಾಲ ಮಾಡಿ ಮದುವೆ ಆಗ್ತಾರೆ. ಭಾರತೀಯರು ಮದುವೆ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.

ಅದ್ಧೂರಿ ಮಂಟಪ, ಮೈತುಂಬಾ ಆಭರಣ, ಬೆಲೆ ಬಾಳುವ ಬಟ್ಟೆ, ನೂರಾರು ಮಂದಿಗೆ ವೆರೈಟಿ ಊಟ, ಮನೆ ತುಂಬ ಅಲಂಕಾರ ಇಲ್ಲ ಅಂದ್ರೆ ಅದು ಮದುವೆ ಅನ್ನಿಸಿಕೊಳ್ಳೋದಿಲ್ಲ. ನಾಲ್ಕೈದು ದಿನ ಮದುವೆ ಸಂಪ್ರದಾಯಗಳನ್ನು ಆಚರಿಸುವ ಪದ್ಧತಿ ಮತ್ತೆ ಬಂದಿದೆ. ಅದ್ದೂರಿ ಮದುವೆ ಅಂತ ದುಂದು ವೆಚ್ಚ ಮಾಡುವ ಬದಲು, ನವ ದಂಪತಿಗಳಿಬ್ಬರು ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​​ ಆಗಿ ಮದುವೆಯಾಗಿದ್ದಾರೆ.

@ArnazHathiram ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಶಿಷ್ಟ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಪೋಸ್ಟ್​ನಲ್ಲಿ ಹೊಸ ಮನೆಯಲ್ಲೇ ವಿವಾಹವಾಗಿರುವ ಫೋಟೋವನ್ನು ಕಾಣಬಹುದು. ನವ ಜೋಡಿಯ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ವಿಡಿಯೋದಲ್ಲಿ ವಧು –ವರ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋದನ್ನು ನೋಡ್ಬಹುದು. ಮನೆ ಪೂರ್ಣ ಸಿದ್ಧವಾದ್ಮೇಲೆ ಜೋಡಿ ತಮ್ಮ ಮದುವೆಯ ಪ್ರಮುಖ ಶಾಸ್ತ್ರಗಳನ್ನು ಅದೇ ಹೊಸ ಮನೆಯಲ್ಲಿ ಮಾಡಿದ್ದಾರೆ. ಹೊಸ ಮನೆಯೊಳಗೆ  ಮದುವೆಯನ್ನು ಸರಳ ಆಚರಣೆಗಳೊಂದಿಗೆ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ. ಮದುವೆ ಸಮಾರಂಭ ಒಂದೆರಡು ದಿನಕ್ಕೆ ಸೀಮಿತ. ಮನೆ ಭವಿಷ್ಯಕ್ಕೆ ಅಗತ್ಯ. ಇದು ಸ್ಮಾರ್ಟ್ ಇನ್ವೆಸ್ಟ್‌ಮೆಂಟ್‌ ಅಂತ ಬಳಕೆದಾರರು ಹೊಗಳಿದ್ದಾರೆ. ಇದು ಬುದ್ಧಿವಂತಿಕೆ ನಿರ್ಧಾರ ಅನ್ನೋದು ಬಳಕೆದಾರರ ಅಭಿಪ್ರಾಯ. ಪ್ರಬುದ್ಧತೆ ಎಂದರೆ ಭವಿಷ್ಯಕ್ಕಾಗಿ ಮತ್ತು ನಿಮ್ಮ ಸ್ವಂತ ಮನೆಗಾಗಿ ಹಣವನ್ನು ಉಳಿಸುವುದು, ದೊಡ್ಡ ಮದುವೆಗೆ ಅದನ್ನು ವ್ಯರ್ಥ ಮಾಡುವುದಲ್ಲ ಅಂತ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article