ಬೆಂಗಳೂರು: ಝುಡಿಯೋ ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು..!!!

ಬೆಂಗಳೂರು: ಝುಡಿಯೋ ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು..!!!

ಬೆಂಗಳೂರು :ಒಂದೇ ರೀತಿಯ ಡಿಸೈನ್‌ಗಳಿಂದಾಗಿ ಗ್ರಾಹಕರು ಮುಜುಗರ ಅನುಭವಿಸುತ್ತಿದ್ದು, ಈ ಕಾರಣದಿಂದ ಝುಡಿಯೋದಿಂದ ದೂರ ಸರಿಯುತ್ತಿದ್ದಾರೆ.
ಮಧ್ಯಮ ವರ್ಗದ ಜನತೆಗೆ ಗುಣಮಟ್ಟದ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವ ಉದ್ದೇಶದಿಂದ ಆರಂಭವಾದ ಮಳಿಗೆಯೇ ಝುಡಿಯೋ. ಇಲ್ಲಿ ಶಾಪಿಂಗ್ ಮಾಡೋದು ಸಹ ಒಂದು ಟ್ರೆಂಡ್ ಆಗಿ ಬದಲಾಗಿದೆ. ಆದ್ರೆ ಇತ್ತೀಚೆಗೆ ಜನರು ಝುಡಿಯೋದತ್ತ ಮುಖ ಮಾಡುತ್ತಿಲ್ಲ.
ಶಾಪಿಂಗ್ ಅಂದ್ರೆ ವಿಭಿನ್ನ ಮತ್ತು ಹೊಸ ಡಿಸೈನ್ ಬಟ್ಟೆ ಖರೀದಿಸಬೇಕು ಎಂದು ಹೋಗುತ್ತಾರೆ. ಹಾಗೆಯೇ ತಾನು ಧರಿಸುವ ಬಟ್ಟೆ ಬೇರೆಯವರಿಗಿಂತ ಭಿನ್ನವಾಗಿರಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ತನ್ನ ಡ್ರೆಸ್‌ನಿಂದ ಎಲ್ಲರೂ ತನ್ನನ್ನು ಗುರುತಿಸಬೇಕು ಎಂದು ವಿಶೇಷವಾಗಿ ಮಹಿಳೆಯರು ಬಯಸುತ್ತಾರೆ.
ಆದ್ರೆ ಇಂದು ಝುಡಿಯೋನಲ್ಲಿ ಸಿಗುವ ಬಟ್ಟೆಗಳು ಬಹುತೇಕರ ಬಳಿಯಲ್ಲಿರುತ್ತವೆ. ಯಾರೇ ಝುಡಿಯೋನ ಮೆಟಿರಿಯಲ್ ಧರಿಸಿದ್ರೆ ಇಂದು ಜನರು ಗುರುತಿಸುತ್ತಾರೆ. ಓ ಇದು ಝುಡಿಯೋ ಅಲ್ಲವಾ? ನನ್ನ ಬಳಿಯಲ್ಲಿಯೂ ಇದೆ ಅಂತಾರೆ. ಕೆಲವೊಮ್ಮೆ ಒಂದೇ ಡ್ರೆಸ್ ಧರಿಸಿ ಬಂದು ಮುಜುಗರಕ್ಕೊಳಗಾಗುವ ಸನ್ನಿವೇಶ ಸೃಷ್ಟಿಯಾಗುತ್ತವೆ
ಈ ಕಾರಣದಿಂದ ಜನರು ಝುಡಿಯೋದತ್ತ ಮುಖ ಮಾಡುತ್ತಿಲ್ಲ. ಉತ್ತಮ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ನೀಡುತ್ತಿದ್ರೂ ಝುಡಿಯೋ ಜನರಿಂದ ದೂರ ಸರಿಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಒಂದೇ ಡಿಸೈನ್ ಬಟ್ಟೆ/ಚಪ್ಪಲಿ/ಶೂ/ಬೆಲ್ಟ್/ಫ್ಯಾಶನ್ ಆಕ್ಸಸರಿಸ್ ಗಳು ಮಳಿಗೆಯಲ್ಲಿ ಕಾಣಸಿಗುತ್ತಿವೆ.

ಈ ಎಲ್ಲ ಕಾರಣದಿಂದ ಝುಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೋಲ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಝಡಿಯೋಗೆ ಬದಲಾವಣೆ ಅಗತ್ಯವಾಗಿದೆ.


Ads on article

Advertise in articles 1

advertising articles 2

Advertise under the article