ಬಿಹಾರ :ಫ್ಯಾನ್​ ವಿಚಾರಕ್ಕೆ ಸಹಪಾಠಿಗಳಿಂದ ಹಲ್ಲೆ; 4ನೇ ತರಗತಿ ವಿದ್ಯಾರ್ಥಿನಿ ಸಾವು...!

ಬಿಹಾರ :ಫ್ಯಾನ್​ ವಿಚಾರಕ್ಕೆ ಸಹಪಾಠಿಗಳಿಂದ ಹಲ್ಲೆ; 4ನೇ ತರಗತಿ ವಿದ್ಯಾರ್ಥಿನಿ ಸಾವು...!

class-4-student-in-sitamarhi-beaten-to-death-by-classmates-in-school

ಬಿಹಾರ: ಫ್ಯಾನ್​ ವಿಚಾರಕ್ಕೆ ಸಹಪಾಠಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳವೊಂದು ಸಾವಿನಲ್ಲಿ ಅಂತ್ಯವಾಗಿದೆ. ಇಬ್ಬರು ಬಾಲಕಿಯರಿಂದ ಗಂಭೀರವಾಗಿ ಹಲ್ಲೆಗೊಳಗಾದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ಸ್ಮೃತಿ ಕುಮಾರಿ ಎಂದು ಗುರುತಿಸಲಾಗಿದ್ದು, ಭಾರತ ನೇಪಾಳ ಗಡಿಯ ಸೊನಬರ್ಸಾ ಬ್ಲಾಕ್​ನ ಸೊಹರ್ವಾ ಗ್ರಾಮದ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ.

ಘಟನೆ ಕುರಿತು ಮಾತನಾಡಿರುವ ಮೃತ ವಿದ್ಯಾರ್ಥಿನಿ ಸಂಬಂಧಿ ನಾಗೇಂದ್ರ ರೈ, ಬಾಲಕಿ ಎಂದಿನಂತೆ ಸೋಮವಾರ ಶಾಲೆಗೆ ತೆರಳಿದ್ದು, ಶಾಲೆಯಲ್ಲಿ ಮಧ್ಯಾಹ್ನ ಫ್ಯಾನ್​ ವಿಚಾರಕ್ಕೆ ನಡೆದ ಘಟನೆ ಈ ರೀತಿ ಅಂತ್ಯ ಕಂಡಿದೆ ನೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ: ಮಧ್ಯಾಹ್ನ ಸ್ಮೃತಿ ಶಾಲೆಯಲ್ಲಿ ಫ್ಯಾನ್​ ಆನ್​ ಮಾಡಲು ಹೋದಾಗ ಇದಕ್ಕೆ ಇಬ್ಬರು ವಿದ್ಯಾರ್ಥಿನಿಯರು ವಿರೋಧಿಸಿದ್ದು, ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಮೃತಿ ಗಂಭೀರವಾಗಿ ಗಾಯಗೊಂಡು, ಅಸ್ವಸ್ಥಗೊಂಡಳು. ಆಗ ತಕ್ಷಣಕ್ಕೆ ಶಿಕ್ಷಕರು ಬಂದು ಜಗಳವನ್ನು ನಿಲ್ಲಿಸಿದ್ದರು.

ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಸಾವು: ಬಾಲಕಿ ಸ್ಥಿತಿ ಗಂಭೀರವಾದ ಕಾರಣ ಶಿಕ್ಷಕರು ಸ್ಮೃತಿ ಪೋಷಕರಿಗೆ ಮಾಹಿತಿ ನೀಡಿದ್ದರು. ತಕ್ಷಣಕ್ಕೆ ಶಾಲೆಗೆ ಬಂದ ಅವರು ಮಗಳನ್ನು ಸೀತಾಮರ್ಹಿಯಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಕೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದ ಹಿನ್ನೆಲೆ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗೆ ಪಾಟ್ನಾಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಆಂಬ್ಯುಲೆನ್ಸ್​ ಮೂಲಕ ಪಾಟ್ನಾದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಶೋಕಸಾಗರದಲ್ಲಿ ಮುಳುಗಿದ ಕುಟುಂಬ: ಬಾಲಕಿ ಸಾವಿನ ಬೆನ್ನಲ್ಲೇ ಗ್ರಾಮದ ನೂರಾರು ಜನರು ಮೃತ ಬಾಲಕಿಯ ಮನೆಗೆ ಆಗಮಿಸಿ, ಸಂತಾಪ ಸೂಚಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೂ ಮಾಹಿತಿ ಲಭ್ಯವಾಗಿದ್ದು, ತಕ್ಷಣಕ್ಕೆ ಬಂದ ಅವರು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಮುಂದಾದರು.

ಘಟನೆ ಮಾಹಿತಿ ನೀಡಿದ ಸದರ್​ ಎಸ್​ಡಿಪಿಒ, ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಶಿಕ್ಷಕರು ಮತ್ತು ಶಾಲಾ ಮಕ್ಕಳಿಂದ ಹೇಳಿಕೆ ಪಡೆಯುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿಕ್ಷಕರು, ಪ್ರಾಂಶುಪಾಲರ ವಿರುದ್ಧ ಆಕ್ರೋಶ: ಈ ಘಟನೆ ಸಂದರ್ಭದಲ್ಲಿ ಶಿಕ್ಷಕರು ಮಧ್ಯ ಪ್ರವೇಶಿಸಿದ್ದರೆ, ಈ ರೀತಿ ದುರಂತ ಸಂಭವಿಸುತ್ತಿರಲಿಲ್ಲ. ಈ ಘಟನೆ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರ ನಿರ್ಲಕ್ಷ್ಯವಾಗಿದೆ ಎಂದು ಸ್ಥಳೀಯರು ಮತ್ತು ಮೃತ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article