ಬಿಹಾರ :ಕಟ್ಟಿಂಗ್​ ಮಷಿನ್​​​ ಬಳಸಿ ಅಣ್ಣನ ಮೂವರು ಮಕ್ಕಳನ್ನು ನಿರ್ದಯವಾಗಿ ಕೊಂದ ಹಾಕಿದ ಚಿಕ್ಕಪ್ಪ...!

ಬಿಹಾರ :ಕಟ್ಟಿಂಗ್​ ಮಷಿನ್​​​ ಬಳಸಿ ಅಣ್ಣನ ಮೂವರು ಮಕ್ಕಳನ್ನು ನಿರ್ದಯವಾಗಿ ಕೊಂದ ಹಾಕಿದ ಚಿಕ್ಕಪ್ಪ...!

MURDER IN AURANGABAD  UNCLE KILLED THREE NEPHEWS  BIHAR AURANGABAD TRIPLE MURDER  ಕೊಲೆ

​​ಬಿಹಾರ : ಅಣ್ಣನ ಮಕ್ಕಳನ್ನು ಕತ್ತು ಸೀಳಿ ಕ್ರೂರವಾಗಿ ಚಿಕ್ಕಪ್ಪನೇ ಹತ್ಯೆ ಮಾಡಿರುವ ಘಟನೆ ಇಲ್ಲಿನ ಹಸ್ಪುರ ಪೊಲೀಸ್​​​ ಠಾಣೆ ವ್ಯಾಪ್ತಿಯ ಖುತಾತನ್​ ಗ್ರಾಮದಲ್ಲಿ ವರದಿಯಾಗಿದೆ. ಈ ನಡುವೆ ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಅವರನ್ನು ಪಾಟ್ನಾದ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಗುಡ್ಡು ಪಾಲ್ ಅವರ ಮಕ್ಕಳಾದ ಅನೀಶ್ ಕುಮಾರ್ (10), ಆಯುಷ್ ಕುಮಾರ್ (7) ಮತ್ತು ಅನುಷ್ಕಾ ಕುಮಾರಿ (5) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿ ಅಮಂತ್​ ಪಾಲ್​ ತನ್ನ ಇಬ್ಬರು ಅಣ್ಣನ ಗಂಡು ಮಕ್ಕಳು ಮತ್ತು ಓರ್ವ ಮಗಳನ್ನು ಹತ್ಯೆ ಮಾಡಿದ್ದಾನೆ. ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಔರಂಗಾಬಾದ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಗೆ ರವಾನೆ ಮಾಡಿದ್ದಾರೆ.

ಕಟಿಂಗ್ ಮಷಿನ್ ಬಳಸಿ ಹತ್ಯೆ: ಅವಿವಾಹಿತ ಆರೋಪಿ ಶುಕ್ರವಾರ ಬೆಳಗ್ಗೆ ಬೈಕ್​ನಲ್ಲಿ ಮನೆಯಿಂದ ಹೊರಟು ಸ್ವಲ್ಪ ಸಮಯದ ನಂತರ ಹಿಂತಿರುಗಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಣ್ಣನ ಮನೆಗೆ ಬಂದ ಆತ ಬಾಗಿಲು ತಟ್ಟಿದ್ದಾನೆ. ಆದರೆ, ಅವನ ಅತ್ತಿಗೆ ಸ್ನಾನ ಮಾಡುತ್ತಿದ್ದರಿಂದ ಬಾಗಿಲು ತೆರೆಯಲು ವಿಳಂಬವಾಯಿತು. ಒಳಗೆ ಬಂದದ್ದೇ ತಡ ಸ್ಪೀಕರ್ ವಾಲ್ಯೂಮ್​ ಅನ್ನು ಪೂರ್ಣವಾಗಿ ಹೆಚ್ಚಿಸಿ ಕಟಿಂಗ್ ಮಷಿನ್ ಬಳಸಿ ಮೂವರು ಮಕ್ಕಳ ಕತ್ತು ಸೀಳಿದ್ದಾನೆ ಎಂದು ಆರೋಪಿಸಲಾಗಿದೆ.

ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ದೌದ್‌ನಗರ ಎಸ್‌ಡಿಪಿಒ ಅಶೋಕ್ ಕುಮಾರ್ ದಾಸ್ ಹೇಳಿದ್ದಾರೆ. ಕೊಲೆಗಳ ಹಿಂದಿನ ನಿಖರವಾದ ಉದ್ದೇಶವನ್ನು ನಾವು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಮೃತ ಮಕ್ಕಳ ತಂದೆ ರೈಲಿನಲ್ಲಿ ಪ್ಯಾಂಟ್ರಿ ಕಾರ್​ನಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೇ, ಪ್ರಕರಣದ ಹಲವಾರು ಅಂಶಗಳು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ ಮತ್ತು ಸಂಪೂರ್ಣ ತನಿಖೆಯ ನಂತರವೇ ಈ ಬಗ್ಗೆ ದೃಢೀಕರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕವಾಗಿ, ಕಿರಿಯ ಸಹೋದರ ತನ್ನ ಅಣ್ಣನ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಘಟನೆಯ ನಂತರ, ಆರೋಪಿಯೂ ಸಹ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಲಾಗಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹಸ್ಪುರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article