ಉತ್ತರ ಪ್ರದೇಶ :ನೆಮ್ಮದಿಯಿಂದ ನಿದ್ರಿಸು ಮಗನೇ': ಕೋಮಾದಲ್ಲಿರುವ ಹರೀಶ್ ರಾಣಾಗೆ ಪೋಷಕರ ಕಣ್ಣೀರ ಸಾಂತ್ವನ...!!!
ಘಾಜಿಯಾಬಾದ್ (ಉತ್ತರಪ್ರದೇಶ): ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಮಂತ್ರಘೋಷಗಳು. ಹಣೆಯನ್ನು ಸವರುತ್ತಿರುವ ಪ್ರೀತಿಯ ಕೈಗಳು. 'ಎಲ್ಲವೂ ಸರಿ ಹೋಗುತ್ತದೆ ಮಗನೇ' ಎಂಬ ಸಾಂತ್ವನದ ನುಡಿಗಳು. ಇದು, ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ಅವರ ಕುಟುಂಬಸ್ಥರ ಕಣ್ಣೀರ ಘಳಿಗೆಗಳು.
ಜೀವಚ್ಛವವಾಗಿರುವ ಹರೀಶ್ ರಾಣಾ ಅವರಿಗೆ ಸುಪ್ರೀಂ ಕೋರ್ಟ್ಗೆ ಇತ್ತೀಚೆಗೆ ದಯಮಾರಣ ಕರುಣಿಸಿದೆ. ಹೀಗಾಗಿ, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ವೈದ್ಯರ ಸಮ್ಮುಖದಲ್ಲಿ ಗೌರವಯುತ ಸಾವು ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇತ್ತ, ಪೋಷಕರು ತಮ್ಮ ಕಣ್ಣೆದುರಲ್ಲೇ ಮಗನ ಸಾವಾಗುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ಗೋಳಾಡುತ್ತಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಹರೀಶ್ ರಾಣಾ ಅವರಿಗೆ ಪ್ಯಾಸಿವ್ ಯುಥನೇಷಿಯಾ ಅಂದರೆ ಪರೋಕ್ಷ ದಯಾಮರಣಕ್ಕೆ ಅನುಮತಿ ನೀಡಿದೆ. ಇದು ದೇಶದಲ್ಲೇ ಮೊದಲ ಪ್ರಕರಣವಾಗಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಘನತೆಯಿಂದ ರಾಣಾ ಅವರ ಜೀವ ರಕ್ಷಕ ವ್ಯವಸ್ಥೆಯನ್ನು ಹಿಂಪಡೆಯಲು ನ್ಯಾಯಾಲಯ ಸೂಚಿಸಿದೆ.
ಭಾವನಾತ್ಮಕ ಘಳಿಗೆಗಳು: ರಾಣಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸುವ ಮೊದಲು ಘಾಜಿಯಾಬಾದ್‌ನ ಅವರ ಮನೆಯಲ್ಲಿ ನಡೆಸಿದ ಧಾರ್ಮಿಕ ವಿಧಿಯ ವಿಡಿಯೋವೊಂದು ಮನಕಲಕುವಂತಿದೆ. ಬ್ರಹ್ಮಕುಮಾರಿ ಸಂಸ್ಥೆಯ ಸೋದರಿ ಲವ್ಲಿ ಅವರು ಹರೀಶ್ ಅವರ ಹಣೆಗೆ ತಿಲಕವನ್ನಿಟ್ಟು, "ಎಲ್ಲರನ್ನೂ ಕ್ಷಮಿಸಿ, ಎಲ್ಲರಿಂದಲೂ ಕ್ಷಮೆ ಕೇಳುತ್ತಾ ನೆಮ್ಮದಿಯಿಂದ ನಿದ್ರಿಸು. ಎಲ್ಲವೂ ಸರಿಹೋಗುತ್ತದೆ" ಎಂದು ಮೃದುವಾಗಿ ಹೇಳುತ್ತಿರುವುದು ಕಂಡುಬಂದಿದೆ.
ಪ್ರಕರಣದ ಹಿನ್ನೆಲೆ: 2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು. ಜೀವಚ್ಛವವಾಗಿದ್ದ ಮಗನನ್ನು ಅಂದಿನಿಂದಲೂ ಪೋಷಕರು ಕಾಪಾಡುತ್ತಾ ಬಂದಿದ್ದರು. ಆದರೆ, ಯಾವುದೇ ಚೇತರಿಕೆ ಇಲ್ಲದ ಕಾರಣ, ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಗಂಭೀರತೆ ಅರಿತ ಕೋರ್ಟ್, ರಾಣಾ ಅವರಿಗೆ ಘನತೆಯ ಸಾವು ನೀಡಲು ಅನುಮತಿ ನೀಡಿತು. ದೆಹಲಿ ಏಮ್ಸ್ನಲ್ಲಿ ಅವರಿಗೆ ಅಳವಡಿಸಲಾಗಿರುವ ಆಹಾರದ ಕೊಳವೆಯನ್ನು ತೆಗೆದುಹಾಕಿ, ಕೇವಲ ನೋವು ನಿವಾರಕ ಚಿಕಿತ್ಸೆಯನ್ನು ಮುಂದುವರಿಸಿ. ಇದರಿಂದ ಪ್ರಕೃತಿ ಸಹಜವಾಗಿ ಸಾವು ಅನುಭವಿಸಲಿ ಎಂದು ಹೇಳಿತ್ತು.
ಸರ್ಕಾರದಿಂದ ಪೋಷಕರಿಗೆ ನೆರವು: ಘಾಜಿಯಾಬಾದ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮತ್ತು ಮುನ್ಸಿಪಲ್ ಕಮಿಷನರ್ ವಿಕ್ರಮಾದಿತ್ಯ ಮಲಿಕ್ ಅವರು ಹರೀಶ್ ರಾಣಾ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದೆ. ಅಲ್ಲದೆ, ಕುಟುಂಬದ ಜೀವನೋಪಾಯಕ್ಕಾಗಿ ಉಚಿತವಾಗಿ ಮಳಿಗೆಯೊಂದನ್ನು ಮಂಜೂರು ಮಾಡುವುದಾಗಿ ತಿಳಿಸಿದೆ.
ಕೋಮಾದಲ್ಲಿದ್ದ ರಾಣಾ ಅವರನ್ನು ಉಳಿಸಿಕೊಳ್ಳಲು ಪೋಷಕರು ಚಿಕಿತ್ಸೆಯ ವೆಚ್ಚಕ್ಕಾಗಿ ದೆಹಲಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದರು ಎಂಬುದು ಗಮನಾರ್ಹ ಸಂಗತಿ.