ಉತ್ತರ ಪ್ರದೇಶ :ಯಮುನಾ ನದಿಯಲ್ಲಿ 30 ಭಕ್ತರಿದ್ದ ದೋಣಿ ಮಗುಚಿ,10 ಮಂದಿ ಸಾವು..!

ಲಖನೌ: ಉತ್ತರ ಪ್ರದೇಶದ ಮಥುರಾದ ಯಮುನಾ ನದಿಯ(Yamuna river) ಕೇಶಿ ಘಾಟ್ನಲ್ಲಿ ಇಂದು(ಏ. 10) ಪಂಜಾಬ್ನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿ ಘಟನೆ ನಡೆದಿದೆ. ಲೂದಿಯಾನದಿಂದ ಬಂದ 30ಕ್ಕೂ ಹೆಚ್ಚು ಮಂದಿಯ ಗುಂಪು ಎರಡು ದೋಣಿಗಳನ್ನು ಬಾಡಿಗೆ ಪಡೆದು ಯಮುನಾ ನದಿಯಲ್ಲಿ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಹಠಾತ್ ದೋಣಿ ಮಗುಚಿ ಬಿದ್ದಿದೆ. 22 ಜನರನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದು, ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಪ್ರತ್ಯಕ್ಷದರ್ಶಿಯ ಪ್ರಕಾರ, ಜೋರಾದ ಗಾಳಿಯಿಂದಾಗಿ ದೋಣಿ ನದಿಯ ಮಧ್ಯದಲ್ಲಿ ತೀವ್ರವಾಗಿ ತೂಗಾಡಲು ಪ್ರಾರಂಭಿಸಿತು, ಅದರ ವೇಗ ಹೆಚ್ಚಾಯಿತು ಮತ್ತು ಅದು ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಮಗುಚಿ ಬಿತ್ತು ಎಂದು ಹೇಳಿದ್ದಾರೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ(SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಹಾಗೂ ಸುಮಾರು 50 ಸ್ಥಳೀಯ ಡೈವರ್‌ಗಳ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಿರುಗಾಳಿಯಿಂದಾಗಿ ದೋಣಿ ನದಿಯ ಮಧ್ಯದಲ್ಲಿ ತೂಗಾಡಲು ಪ್ರಾರಂಭಿಸಿತು ಮತ್ತು ಅದರ ವೇಗ ಹೆಚ್ಚಾಗಿ ಅದು ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.