ಬೆಂಗಳೂರು: ಧಾರಾಕಾರ ಮಳೆ ಬೌರಿಂಗ್​ ಆಸ್ಪತ್ರೆ ಕಾಂಪೌಂಡ್​ ಕುಸಿದು 7 ಜನ ಸಾವಿನ ಶಂಕೆ...!!

ಬೆಂಗಳೂರು: ಧಾರಾಕಾರ ಮಳೆ ಬೌರಿಂಗ್​ ಆಸ್ಪತ್ರೆ ಕಾಂಪೌಂಡ್​ ಕುಸಿದು 7 ಜನ ಸಾವಿನ ಶಂಕೆ...!!

RAIN IN BENGALURU

ಬೆಂಗಳೂರು: ನಗರದಲ್ಲಿ ಇಂದು ಸಂಜೆ ದಾರಾಕಾರ ಮಳೆ ಸುರಿಯುತ್ತಿದ್ದು, ಬೌರಿಂಗ್​ ಆಸ್ಪತ್ರೆಯ ಕಾಂಪೌಂಡ್​ ಕುಸಿದು ಅವಘಡ ಸಂಭವಿಸಿದ್ದು 7 ಮಂದಿ ಸಾವನ್ನಪ್ಪಿರುವುದಗಿ ಶಂಕಿಸಲಾಗಿದೆ.

ಮೃತರು ಬೀದಿ ಬದಿ ವ್ಯಾಪಾರಸ್ಥರು ಎಂದು ಹೇಳಲಾಗಿದ್ದು, ಮೂವರು ಮಕ್ಕಳೂ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ನಗರದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ, ಮಲ್ಲೇಶ್ವರಂ, ಶಾಂತಿನಗರ, ರಿಚ್ಮಂಡ್ ಸರ್ಕಲ್, ವಿಲ್ಸನ್ ಗಾರ್ಡನ್, ಕೋರಮಂಗಲ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ.

ವಿಲ್ಸನ್ ಗಾರ್ಡನ್‌ನ ಹೆರಿಗೆ ಆಸ್ಪತ್ರೆ ಆವರಣಕ್ಕೆ ಮಳೆ ನೀರು ನುಗ್ಗಿದೆ. ಪರಿಣಾಮ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿದ್ದು ವಾಹನ ಹೊರತೆಗೆಯಲು ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ‌ ಮಲ್ಲೇಶ್ವರಂನಲ್ಲಿ ರಸ್ತೆ ಮೇಲೆ ಮರ ಉರುಳಿದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ. ಮಳೆಯ ಅಬ್ಬರ ಮುಂದುವರೆದಿದ್ದು, ಸಿಲಿಕಾನ್ ಸಿಟಿಯ ಜನರನ್ನ ಹೈರಾಣಗುವಂತೆ ಮಾಡಿದೆ.

Ads on article

Advertise in articles 1

advertising articles 2

Advertise under the article