ಉತ್ತರ ಪ್ರದೇಶ :ಐದು ತಿಂಗಳಿಂದ ಮಗಳ ಅಸ್ಥಿಪಂಜರದೊಂದಿಗೆ ವಾಸಿಸುತ್ತಿದ್ದ ತಂದೆ: ಈಗ ಬೆಳಕಿಗೆ ಬಂದ ಆಘಾತಕಾರಿ ಘಟನೆ; ಏನಿದು ಪ್ರಕರಣ.?

ಉತ್ತರ ಪ್ರದೇಶ :ಐದು ತಿಂಗಳಿಂದ ಮಗಳ ಅಸ್ಥಿಪಂಜರದೊಂದಿಗೆ ವಾಸಿಸುತ್ತಿದ್ದ ತಂದೆ: ಈಗ ಬೆಳಕಿಗೆ ಬಂದ ಆಘಾತಕಾರಿ ಘಟನೆ; ಏನಿದು ಪ್ರಕರಣ.?

meerut shocking news father living with daughter dead body 5 months

 ಉತ್ತರಪ್ರದೇಶ: ಜಿಲ್ಲೆಯಲ್ಲಿ ಯುವತಿಯೊಬ್ಬಳ ಅಸ್ಥಿಪಂಜರ ಪತ್ತೆಯಾಗಿದೆ. ಅಚ್ಚರಿ ವಿಚಾರ ಎಂದರೆ ಈ ಅಸ್ಥಿಪಂಜರ ದೊರೆತಿರುವುದು ಮೃತ ಯುವತಿಯ ತಂದೆಯ ಮನೆಯಲ್ಲಿ.

ಪೊಲೀಸರ ಮಾಹಿತಿ ಪ್ರಕಾರ, ಯುವತಿ ಐದು ತಿಂಗಳ ಹಿಂದೆ ಸಾವನ್ನಪ್ಪಿದ್ದರು. 76 ವರ್ಷದ ತಂದೆ ತನ್ನ ಮಗಳ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ವಾಸಿಸುತ್ತಿದ್ದರು. ಇದಲ್ಲದೇ, ಅವರು ಮಾಟಮಂತ್ರದಲ್ಲಿಯೂ ಭಾಗಿಯಾಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಲ್ಲಿ ಸಿಕ್ಕಿವೆ ಸುಗಂಧದ್ರವ್ಯದ ಬಾಟಲಿಗಳು: ಶುಕ್ರವಾರ ಇಡೀ ಘಟನೆ ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪೊಲೀಸರು ಅಸ್ಥಿಪಂಜರವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ಹಲವಾರು ಸುಗಂಧ ದ್ರವ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. ಈ ಬಾಟಲಿಗಳನ್ನು ಮೃತ ದೇಹದಿಂದ ಬರುವ ದುರ್ವಾಸನೆಯನ್ನು ಮರೆಮಾಚಲು ಬಳಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸಂಪೂರ್ಣ ಪ್ರಕರಣವನ್ನು ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ಮಾಡುತ್ತಿದ್ದಾರೆ.

ಅಷ್ಟಕ್ಕೂ ಏನಿದು ಘಟನೆ?: ಉದಯ್ ಭಾನು ಬಿಸ್ವಾಸ್ ಎಂಬುವವರು ಮೀರತ್‌ನ ಸದರ್ ಪೊಲೀಸ್ ಠಾಣೆ ಪ್ರದೇಶದ ತೇಲಿ ಮೊಹಲ್ಲಾದಲ್ಲಿ ವಾಸಿಸುತ್ತಿದ್ದಾರೆ. ಅವರು ಮಾಧ್ಯಮಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಗುಮಾಸ್ತರಾಗಿ ನಿವೃತ್ತರಾಗಿದ್ದರು. ಅವರ ಏಕೈಕ ಪುತ್ರಿ ಪ್ರಿಯಾಂಕಾ ಕೂಡ ಅವರೊಂದಿಗೆ ವಾಸಿಸುತ್ತಿದ್ದರು. ಪ್ರಿಯಾಂಕಾ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, ಕಂಪ್ಯೂಟರ್ ವಿಷಯಗಳ ಬೋಧನೆ ಮಾಡುತ್ತಿದ್ದರು. ಪ್ರಿಯಾಂಕಾ ಎಂ.ಎಸ್ಸಿ ಹಾಗೂ ಎಂ.ಟೆಕ್ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡಿದ್ದರು.

13 ವರ್ಷಗಳ ಹಿಂದೆಯೇ ನಿಧನರಾಗಿದ್ದ ಪತ್ನಿ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಉದಯ್ ಭಾನು ಅವರ ಪತ್ನಿ ಶರ್ಮಿಷ್ಠಾ 13 ವರ್ಷಗಳ ಹಿಂದೆ ನಿಧರಾಗಿದ್ದರು. 2013 ರಲ್ಲಿ ವಾರಣಾಸಿಯ ಯುಪಿ ಬೋರ್ಡ್ ಕಚೇರಿಯಲ್ಲಿ ನಿಯೋಜಿತರಾಗಿದ್ದ ವೇಳೆ ಉದಯ್​​ ಬಾಬು ಮನೆಗೆ ಬರುತ್ತಿರಲಿಲ್ಲ. ಇದರಿಂದ ಶರ್ಮಿಷ್ಠಾ ತೀವ್ರ ಅಸಮಾಧಾನಗೊಂಡಿದ್ದರು. ಆ ಬಳಿಕ ಅವರು ನಿಧನರಾದರು. ತಾಯಿ ನಿಧನರಾದ ಬಳಿಕ ಮಗಳು ಪ್ರಿಯಾಂಕಾ ಚಿಂತಿತಳಾದಳು. ತಾಯಿ ಕಳೆದುಕೊಂಡ ದುಃಖದಲ್ಲಿ ಅವರು ಯಾರೊಂದಿಗೂ ಮಾತನಾಡದೇ ಮೌನಕ್ಕೆ ಶರಣಾದರು. ಅವರು ಕ್ರಮೇಣ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ತಂದೆಯ ಪ್ರಕಾರ, ಪ್ರಿಯಾಂಕಾ ಕಾಮಾಲೆ ರೋಗಕ್ಕೆ ತುತ್ತಾದರು. ಉದಯ್ ಭಾನು ತನ್ನ ಮಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಇಬ್ಬರೂ ಕಣ್ಮರೆಯಾದರು. ವೃದ್ಧ ವ್ಯಕ್ತಿ ಡೆಹ್ರಾಡೂನ್‌ನಲ್ಲಿರುವ ತನ್ನ ಮಗಳಿಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು.

ಪ್ರಕರಣ ಬಯಲಾಗಿದ್ದು ಹೇಗೆ?; ಶುಕ್ರವಾರ ಮಧ್ಯಾಹ್ನ ಉದಯ್ ಚಹಾ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ ಅವರ ಸಂಬಂಧಿಯೊಬ್ಬರು, ಇವರ ಮಗಳು ಪ್ರಿಯಾಂಕಾಳ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಇದಕ್ಕೆ ಉತ್ತರಿಸಿದ ಉದಯ್​ ಅವಳು ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳಿದ್ದರು. ಇವರ ಉತ್ತರದಿಂದ ಅವರು ಸಮಾಧಾನಗೊಳ್ಳದೇ ಮತ್ತೆ ಮತ್ತೆ ಪ್ರಶ್ನಿಸಿದ್ದರು. ಆದರೂ ಅವರು ತಮ್ಮ ಹಿಂದಿನ ಮಾತನ್ನೇ ಹೇಳಿ ಸಮರ್ಥಿಸಿಕೊಂಡಿದ್ದರು.

ಚಹಾ ಅಂಗಡಿಯಲ್ಲಿ ಮಗಳ ಬಗ್ಗೆ ವಿಚಾರಿಸಿದ ಸಂಬಂಧಿಕರು, ಸಂಜೆ ಉದಯ್​ ಮನೆಗೆ ಬಂದಿದ್ದರು. ಅವರು ಮನೆಗೆ ಪ್ರವೇಶಿಸಿದ ತಕ್ಷಣ ಮಗಳು ಒಳಗೆ ಇದ್ದಾಳೆ ಎಂದು ಹೇಳಿದ್ದರು. ಆದರೆ, ಮನೆಯಲ್ಲಿ ದೃಶ್ಯ ಸತ್ಯವನ್ನು ಬಹಿರಂಗ ಪಡಿಸಿತ್ತು. ಆಕೆಯ ಅಸ್ಥಿಪಂಜರವು ಹಾಸಿಗೆಯ ಮೇಲೆ ಬಿದ್ದಿತ್ತು, ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು. ಮತ್ತೊಂದು ಕಡೆ ಮನೆಯು ಕೊಳಕಿನಿಂದ ತುಂಬಿತ್ತು. ಅಂತಿಮವಾಗಿ ಸತ್ಯ ಸಂಬಂಧಿಕರ ಮುಂದೆ ಬಯಲಾಗಿತ್ತು. ವೃದ್ಧನ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು. ಈ ಎಲ್ಲ ದೃಶ್ಯಗಳನ್ನ ನೋಡಿದ ಉದಯ್​ ಬಾನು ಸಂಬಂಧಿಕರು, ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.

ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ, ಶವವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಉದಯ್ ಭಾನು ಬಿಸ್ವಾಸ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಈ ಶವವು ಸುಮಾರು ಐದು ತಿಂಗಳ ಹಿಂದೆ ನಿಧನರಾದ ತಮ್ಮ ಮಗಳು ಪ್ರಿಯಾಂಕಾ ಬಿಸ್ವಾಸ್ ಅವರದ್ದು ಎಂದು ಒಪ್ಪಿಕೊಂಡಿದ್ದಾರೆ.

ಪ್ರಿಯಾಂಕಾ ಅವರ ಸಂಬಂಧಿ ಬಿಸ್ವಜಿತ್ ಕುಮಾರ್ ಬಿಸ್ವಾಸ್ ಮಾತನಾಡಿ, ಡಿಸೆಂಬರ್ 5 ರಂದು ಕೊನೆಯ ಬಾರಿಗೆ ಪ್ರಿಯಾಂಕಾಳನ್ನು ನೋಡಿದ್ದೇನೆ. ಆ ಬಳಿಕ ಅವಳು ಕಾಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಸುಗಂಧ ದ್ರವ್ಯಗಳನ್ನು ವಶಕ್ಕೆ ಪಡೆದ ಪೊಲೀಸರು: ಸಿವಿಲ್ ಲೈನ್ಸ್ ಸಿಒ ನವೀನ ಶುಕ್ಲಾ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಆಗಮಿಸಿ ಮನೆಯನ್ನು ತಪಾಸಣೆಗೆ ಒಳಪಡಿಸಿತು. ಈ ವೇಳೆ, ಮನೆಯಿಂದ ಹಲವಾರು ಸುಗಂಧ ದ್ರವ್ಯ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಉದಯ್ ಭಾನು ಬಿಸ್ವಾಸ್ ಅವರನ್ನು ವಿಚಾರಣೆ ನಡೆಸಿದ ನಂತರ, ಅವರನ್ನು ವಶಕ್ಕೆ ಪಡೆದು ಸದರ್ ಬಜಾರ್ ಪೊಲೀಸ್ ಠಾಣೆಗೆ ಕರೆದೊಯ್ದರು.

ಧರ್ಮ ಗುರುವಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಯಾಂಕ: ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಇನ್ನೂ ಹಲವು ವಿಚಾರಗಳು ಬಹಿರಂಗವಾಗಿವೆ. ಮೃತ ಪ್ರಿಯಾಂಕಾ ಒಬ್ಬ ಧರ್ಮಗುರುವಿನಿಂದ ಚಿಕಿತ್ಸೆ ಪಡೆಯುತ್ತಿದ್ದಳು ಎಂಬುದು ತಿಳಿದು ಬಂದಿದೆ.

ಘಟನೆ ಬಗ್ಗೆ ಸಿಒ ಹೇಳಿದ್ದಿಷ್ಟು: ತನಿಖೆ ನಡೆಯುತ್ತಿದೆ ಎಂದು ಸಿವಿಲ್ ಲೈನ್ಸ್ ಸಿಒ ನವೀನ ಶುಕ್ಲಾ ಹೇಳಿದ್ದಾರೆ. ದೇಹವು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಫಾರೆನ್ಸಿಕ್​ ಲ್ಯಾಬ್​ ಮತ್ತು ಮರಣೋತ್ತರ ಪರೀಕ್ಷೆಗಳ ಬಳಿಕ ಬರುವ ವರದಿ ಮೇಲೆ ತನಿಖೆ ಮುಂದುವರೆಯಲಿದೆ ಹಾಗೂ ಆ ಬಳಿಕವೇ ಸತ್ಯಗಳು ಹೊರ ಬರಬೇಕಿದೆ. ಇಲ್ಲಿಂದ ಬರುವ ವರದಿಗಳ ಆಧಾರದ ಮೇಲೆ ಮತ್ತಷ್ಟು ತನಿಖೆ ಮಾಡಲಾಗುವುದು ಎಂದು ಶುಕ್ಲಾ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article