ಧಾರವಾಡ :ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಸಾವಿನ ಮನೆ ಸೇರಿದ ಯುವತಿ..!!

ಧಾರವಾಡ :ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಸಾವಿನ ಮನೆ ಸೇರಿದ ಯುವತಿ..!!

ಧಾರವಾಡ :ಪ್ರೀತಿಸಿದ ಹುಡುಗನ ಜೊತೆಗೆ ಮದುವೆಗೆ  ಕುಟುಂಬದವರು ಒಪ್ಪಿಲ್ಲ ಎಂದು  ಯುವತಿ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡ ಘಟನೆ    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಕೇವಲ 18 ವರ್ಷದ ಯುವತ ಶ್ವೇತಾ ಕೊಟೆನ್ನವರ ಆತ್ಮಹತ್ಯೆ ಮಾಡಿಕೊಂಡ ಯುವತಿ. ಶ್ವೇತಾ ಹುಬ್ಬಳ್ಳಿಯ ಕೆರೆಸೂರ ಗ್ರಾಮದ ನಾಗರಾಜ್ ಎನ್ನುವ ಯುವಕನ ಜೊತೆ ಪ್ರೀತಿಯಲ್ಲಿ ಇದ್ದರು. ಇಬ್ಬರೂ ಪರಸ್ಪರ ಇಷ್ಟಪಟ್ಟು, ಮುಂದೆ ಮದುವೆಯಾಗುವ ಆಸೆ ಹೊಂದಿದ್ದರು. ಆದರೆ ಈ ಸಂಬಂಧಕ್ಕೆ ಶ್ವೇತಾ ಅವರ ಮನೆಯವರು ಒಪ್ಪಿಗೆ ಸೂಚಿಸಿಲ್ಲ. ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಮನೆಯೊಳಗೆ ಈ ವಿಷಯದ ಬಗ್ಗೆ ಒತ್ತಡ, ಜಗಳ, ಮಾತಿನ ಚಕಮಕಿ ನಡೆಯುತ್ತಲೇ ಇತ್ತು ಎಂದು ತಿಳಿದುಬಂದಿದೆ.

ಕುಟುಂಬದ ವಿರೋಧ, ಮನೆಯಲ್ಲಿ ನಡೆಯುತ್ತಿದ್ದ ಒತ್ತಡ, ಮುಂದೆ ತನ್ನ ಪ್ರೀತಿಯ ಬದುಕು ಹೇಗಾಗುತ್ತದೆ ಎಂಬ ಆತಂಕ, ಇವೆಲ್ಲವು ಶ್ವೇತಾ ಅವರ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರಿದಂತಿದ್ದು, ಮನಸ್ಸಿಗೆ ತುಂಬಾ ನೋವಾಗಿರುವ ಸಂದರ್ಭದಲ್ಲಿ, ಬೇರೆ ದಾರಿ ಕಾಣದೆ ಶ್ವೇತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯವರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವೇತಾ ಆತ್ಮಹತ್ಯೆಗೆ ನಿಜವಾದ ಕಾರಣವೇನು, ಮನೆಯವರ ವರ್ತನೆ ಹೇಗಿತ್ತು, ಯಾವುದೇ ಪ್ರೇರಣೆ, ಒತ್ತಡ ಅಥವಾ ಹಿಂಸೆ ಇತ್ತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಹಾಗೂ ಕುಟುಂಬದ ಸದಸ್ಯರು, ಪರಿಚಿತರಿಂದ ದೊರೆಯುವ ಮಾಹಿತಿ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Ads on article

Advertise in articles 1

advertising articles 2

Advertise under the article