ಹಾಸನ :ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ಟೆಕ್ಕಿ ಸಾವು...

ಹಾಸನ :ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ಟೆಕ್ಕಿ ಸಾವು...

ಹಾಸನ: ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಟೆಕ್ಕಿ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

ಶ್ವೇತಾ ಬಿ‌.ಜಿ.(25) ಹಠಾತ್ ಸಾವನ್ನಪ್ಪಿದ ಸಾಫ್ಟ್‌ವೇರ್ ಇಂಜಿನಿಯರ್. ಮ್ಯಾಗ್ನಾ ಸಾಫ್ಟ್ ಎಂಬ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ‌ ಕೆಲಸ ಮಾಡಿಕೊಂಡಿದ್ದ ಶ್ವೇತಾ, ಏಪ್ರಿಲ್ 24ರ ಶುಕ್ರವಾರ ಸಂಜೆ ಮನೆಯಲ್ಲಿ ದಿಢೀರ್​ ಕುಸಿದು ಬಿದ್ದಿದ್ದರು. ಬಳಿಕ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ.

ಶ್ವೇತಾ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಚಂದ್ರ ನಾಯಕ್ ಹಾಗೂ ಸರೋಜಾ ದಂಪತಿಯ ಏಕೈಕ ಪುತ್ರಿಯಾಗಿದ್ದರು. ಯುವತಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಚಿಕಿತ್ಸೆಗೆ ಕರೆದೊಯ್ಯುವ ವೇಳೆಗೆ ಕೋಮಾಗೆ ಜಾರಿದ್ದ ಶ್ವೇತಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

Ads on article

Advertise in articles 1

advertising articles 2

Advertise under the article