ಆಹಾರ -ಆರೋಗ್ಯ :ಅಡುಗೆ ಮಾಡುವ ಮುನ್ನ ಕೋಳಿ ಮಾಂಸವನ್ನು ನೀರಿನಲ್ಲಿ ತೊಳೆಯುತ್ತಿದ್ದೀರಾ? ತಜ್ಞರು ನೀಡಿದ್ದಾರೆ ಶಾಕಿಂಗ್ ಎಚ್ಚರಿಕೆ!

ಆಹಾರ -ಆರೋಗ್ಯ :ಅಡುಗೆ ಮಾಡುವ ಮುನ್ನ ಕೋಳಿ ಮಾಂಸವನ್ನು ನೀರಿನಲ್ಲಿ ತೊಳೆಯುತ್ತಿದ್ದೀರಾ? ತಜ್ಞರು ನೀಡಿದ್ದಾರೆ ಶಾಕಿಂಗ್ ಎಚ್ಚರಿಕೆ!


ಅಡುಗೆ ಮಾಡುವ ಮುನ್ನ ಕೋಳಿ ಮಾಂಸವನ್ನು ನೀರಿನಲ್ಲಿ ತೊಳೆಯುತ್ತಿದ್ದೀರಾ? ತಜ್ಞರು ನೀಡಿದ್ದಾರೆ ಶಾಕಿಂಗ್ ಎಚ್ಚರಿಕೆ! Chicken
ಆಹಾರ -ಆರೋಗ್ಯ :ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್​ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ. ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನೂರಕ್ಕೆ ನೂರರಷ್ಟು ಸತ್ಯ.

ಮಾಂಸಗಳಲ್ಲೇ ಚಿಕನ್​ ಅನೇಕರ ನೆಚ್ಚಿನ ಆಹಾರ. ಏಕೆಂದರೆ, ಚಿಕನ್​ ಪ್ರೋಟಿನ್​ನಿಂದ ಸಮೃದ್ಧವಾಗಿರುವುದಲ್ಲದೇ ಸಖತ್​ ಟೇಸ್ಟಿಯಾಗಿರುತ್ತದೆ. ಹೀಗಾಗಿ, ಚಿಕನ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚಿಕನ್​ ರೆಸಿಪಿ ಮಾಡುವಾಗ ಸಾಮಾನ್ಯವಾಗಿ ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಅದನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಲಾಗುತ್ತದೆ. ಕೋಳಿ ಮಾಂಸವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅತ್ಯಂತ ಸುರಕ್ಷಿತ ವಿಧಾನವೆಂದು ಎಲ್ಲರು ಭಾವಿಸಿದ್ದಾರೆ, ಆದರೆ ಈ ವಿಧಾನವೇ ತಪ್ಪು ಎಂದರೆ ನೀವು ನಂಬಲೇಬೇಕು. ಇದು ಕೇಳಲು ತಮಾಷೆಯಾಗಿ ಅನಿಸಿದರೂ ತಜ್ಞರ ಪ್ರಕಾರ ಸಂಪೂರ್ಣ ಸತ್ಯವ. 

ತರಕಾರಿಗಳು, ಗೆಡ್ಡೆಗೆಣಸುಗಳು ಮತ್ತು ಹಣ್ಣುಗಳನ್ನು ತೊಳೆಯುವಂತೆ ಚಿಕನ್ ಅನ್ನು ಅಡುಗೆ ಮಾಡುವ ಮುನ್ನ ನೀರಿನಲ್ಲಿ ತೊಳೆಯುವ ಯಾವುದೇ ಅಗತ್ಯವಿರುವುದಿಲ್ಲ, ಏಕೆಂದರೆ ಹೀಗೆ ತೊಳೆಯುವುದರಿಂದ ಚಿಕನ್‌ನಲ್ಲಿರುವ ಬ್ಯಾಕ್ಟೀರಿಯಾಗಳು ನೀರಿನ ಹನಿಗಳ ಮೂಲಕ ಅಡುಗೆಮನೆಯ ಇತರ ಜಾಗಗಳಿಗೆ ಮತ್ತು ಪಾತ್ರೆಗಳಿಗೆ ಮತ್ತಷ್ಟು ಹರಡುವ ಸಾಧ್ಯತೆ ಇರುತ್ತದೆ.

ಚಿಕನ್ ಅನ್ನು ಎಷ್ಟೇ ಚೆನ್ನಾಗಿ ತೊಳೆದರೂ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಚಿಕನ್‌ನಲ್ಲಿರುವ 'ಸಾಲ್ಮೊನಿಲ್ಲಾ' ಮತ್ತು 'ಕ್ಯಾಂಪಿಲೋಬ್ಯಾಕ್ಟರ್'ನಂತಹ ಮಾರಕ ಬ್ಯಾಕ್ಟೀರಿಯಾಗಳು ನೀರಿನಿಂದ ತೊಳೆಯುವುದರಿಂದ ಸಾಯುವುದಿಲ್ಲ, ಬದಲಿಗೆ ಸರಿಯಾದ ತಾಪಮಾನದಲ್ಲಿ ಚಿಕನ್ ಅನ್ನು ಉತ್ತಮವಾಗಿ ಬೇಯಿಸುವುದರಿಂದ ಮಾತ್ರ ಅವು ನಾಶವಾಗುತ್ತವೆ. 

ಹಸಿ ಚಿಕನ್ ಅನ್ನು ನೀರಿನಲ್ಲಿ ತೊಳೆದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನೀರಿನ ಸಿಂಚನದ ಮೂಲಕ ಅಡುಗೆಮನೆಯ ಮೇಲ್ಮೈ ಹಾಗೂ ಸುತ್ತಲಿನ ಪಾತ್ರೆಗಳಿಗೆ ಹರಡುವುದರಿಂದ, ಅದು ಆರೋಗ್ಯಕ್ಕೆ ಮತ್ತಷ್ಟು ಹಾನಿಕಾರಕ ಮತ್ತು ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಚಿಕನ್ ಅನ್ನು 165 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ, ಆದರೆ ಚಿಕನ್ ಮುಟ್ಟುವ ಮೊದಲು ಮತ್ತು ಮುಟ್ಟಿದ ನಂತರ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಸೋಪು ಮತ್ತು ಉಗುರುಬೆಚ್ಚಗಿನ ನೀರಿನಿಂದ ಕೈಗಳನ್ನು ಹಾಗೂ ಚಿಕನ್ ಇರಿಸಿದ್ದ ಪಾತ್ರೆ, ಬಳಸಿದ ಕಟಿಂಗ್ ಬೋರ್ಡ್ ಮತ್ತು ಚಾಕುವನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯಬಾರದು. ಇದಲ್ಲದೆ, ಚಿಕನ್ ಅನ್ನು ನೀರಿನಲ್ಲಿ ತೊಳೆಯುವ ಬದಲು ಅಡುಗೆ ಮಾಡುವ ಮುನ್ನ ಪೇಪರ್ ಟವೆಲ್ ಬಳಸಿ ಒರೆಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ

Ads on article

Advertise in articles 1

advertising articles 2

Advertise under the article