ಗುಜರಾತ್ :ಆಭರಣ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ: ಮೇಲ್ವಿಚಾರಕ ಸೇರಿ ನಾಲ್ವರು ಕಾರ್ಮಿಕರು ಸಾವು...

ಗುಜರಾತ್ :ಆಭರಣ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ: ಮೇಲ್ವಿಚಾರಕ ಸೇರಿ ನಾಲ್ವರು ಕಾರ್ಮಿಕರು ಸಾವು...

ಗುಜರಾತ್‌ :ಪ್ರಮುಖ ಕೈಗಾರಿಕಾ ನಗರವಾದ ಸೂರತ್‌ನಲ್ಲಿ ಆಭರಣ ಕಾರ್ಖಾನೆಯೊಂದರಲ್ಲಿ ಭಾನುವಾರ(ಜೂ. 07) ವಿಷಕಾರಿ ಅನಿಲ ಸೋರಿಕೆಯಾಗಿ ದುರಂತ ಸಂಭವಿಸಿದ್ದು, ಮೇಲ್ವಿಚಾರಕ ಸೇರಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆಭರಣ ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯವನ್ನು ಸಂಗ್ರಹಿಸಲು ಅಶ್ವಿನಿ ಕುಮಾರ್ ರಸ್ತೆಯಲ್ಲಿರುವ ಆಭರಣ ಕಾರ್ಖಾನೆಯಲ್ಲಿ ಇಟಿಪಿ (ಎಫ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್) ಸೆಪ್ಟಿಕ್ ಟ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಈ ಟ್ಯಾಂಕ್ ಅನ್ನು ಪ್ರತಿ 2 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು.

ಹೀಗಾಗಿ ಇಂದು ಬೆಳಗ್ಗೆ ಮೇಲ್ವಿಚಾರಕ ಮತ್ತು ಮೂವರು ಕಾರ್ಮಿಕರನ್ನು ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ತೆರಳಿದ್ದರು. ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, ಒಬ್ಬ ಕಾರ್ಮಿಕ ಇದ್ದಕ್ಕಿದ್ದಂತೆ ಒಳಗೆ ಬಿದ್ದಿದ್ದಾನೆ. ಅವನನ್ನು ಉಳಿಸುವ ಸಲುವಾಗಿ, ಇತರ ಮೂವರು ಸಹ ಒಬ್ಬರ ನಂತರ ಒಬ್ಬರು ಟ್ಯಾಂಕ್‌ಗೆ ಇಳಿದಿದ್ದಾರೆ.

ಟ್ಯಾಂಕ್‌ನಲ್ಲಿ ಈಗಾಗಲೇ ಸಂಗ್ರಹವಾಗಿದ್ದ ತೀವ್ರವಾದ ವಿಷಕಾರಿ ಅನಿಲದ ವಾಸನೆಯಿಂದ ಉಸಿರುಗಟ್ಟಿ ನಾಲ್ವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ನಾಲ್ವರ ಶವಗಳನ್ನು ಹೊರತೆಗೆದಿದ್ದು, ಆಸ್ಪತ್ರಗೆ ಸಾಗಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಾರ್ಮಿಕರು ಯಾವುದೇ ಸುರಕ್ಷತಾ ಮುಖವಾಡಗಳನ್ನು ಧರಿಸಿರಲಿಲ್ಲ ಎನ್ನಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕ ನಿಖರ ಕಾರಣ ತಿಳಿಯಲಿದೆ.


Ads on article

Advertise in articles 1

advertising articles 2

Advertise under the article