ಬೆಂಗಳೂರು :ರಾಜ್ಯದಲ್ಲಿ‌ ಮತ್ತೆ ಬಸ್ ಪ್ರಯಾಣದರ ಹೆಚ್ಚಳ: ಸಿಎಂ ಹೇಳಿದ್ದೇನು?

ಬೆಂಗಳೂರು :ರಾಜ್ಯದಲ್ಲಿ‌ ಮತ್ತೆ ಬಸ್ ಪ್ರಯಾಣದರ ಹೆಚ್ಚಳ: ಸಿಎಂ ಹೇಳಿದ್ದೇನು?

ಬೆಂಗಳೂರು :ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಏರಿಕೆ ಕುರಿತಂತೆ ಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದು , ರಾಜ್ಯದ ಜನರ ಹಿತಕ್ಕಾಗಿ ಎಂದಿದ್ದಾರೆ. ಕೆಎಸ್‌ಆರ್ ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳು ಬಸ್ ಪ್ರಯಾಣ ದರ ಏರಿಕೆ ಮಾಡಲು ಮನವಿ ಸಲ್ಲಿಸಿವೆ.

ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಕೂಡಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಬಸ್ ದರ ಪ್ರಯಾಣ ದರ ಏರಿಕೆಯಾಗುವುದು ಖಚಿತವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ‘ಡೀಸೆಲ್ ಬೆಲೆ ತುಂಬಾ ಹೆಚ್ಚಳವಾಗಿದೆ. ಡೀಸೆಲ್ ದರ ನೋಡಿದರೆ ಗಾಬರಿಯಾಗುತ್ತದೆ. ಡಿಪೋದ ಬೆಲೆಗೂ ಖಾಸಗಿಯಾಗಿ ಸಿಗುವ ಡೀಸೆಲ್ ದರಕ್ಕೂ ತುಂಬಾ ವ್ಯತ್ಯಾಸವಿದೆ. ಸದ್ಯಕ್ಕೆ ಕೆಎಸ್‌ಆರ್ ಟಿಸಿಯನ್ನೂ ಉಳಿಸಬೇಕು. ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಈ ಕ್ರಮ ಕೈಗೊಳ್ಳಬೇಕಾಗುತ್ತಿದೆ’ ಎಂದು ಸಮರ್ಥನೆ ನೀಡಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಬಸ್ ಪ್ರಯಾಣ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲೇ ಜನರಿಗೆ ಬಸ್ ದರ ಏರಿಕೆ ಬರೆ ಗ್ಯಾರಂಟಿಯಾಗಿದೆ.



Ads on article

Advertise in articles 1

advertising articles 2

Advertise under the article