ಗೋಕಾಕ್: ಕೋಚಿಂಗ್ ಸೆಂಟರ್​ನಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಆರೋಪ: ಶಿಕ್ಷಕ ಪೊಲೀಸ್​ ವಶಕ್ಕೆ..

ಗೋಕಾಕ್: ಕೋಚಿಂಗ್ ಸೆಂಟರ್​ನಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಆರೋಪ: ಶಿಕ್ಷಕ ಪೊಲೀಸ್​ ವಶಕ್ಕೆ..

ಸಾಂದರ್ಭಿಕ ಚಿತ್ರ
ಬೆಳಗಾವಿ: ಕೋಚಿಂಗ್ ಸೆಂಟರ್​‌ನಲ್ಲಿ ಶಿಕ್ಷಕನೋರ್ವ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಗೋಕಾಕ್ ನಗರದಲ್ಲಿ ಕೇಳಿಬಂದಿದೆ.

ದೌರ್ಜನ್ಯಕ್ಕೆ ಒಳಗಾದ ಇಬ್ಬರು ಅಪ್ರಾಪ್ತ ಬಾಲಕಿಯರ ಪೋಷಕರು ಗಂಭೀರ ಆರೋಪ ಮಾಡಿದ್ದು, ಒಳ್ಳೆಯ ಶಿಕ್ಷಣ ಸಿಗಲೆಂದು ಕೋಚಿಂಗ್ ಸೆಂಟರ್​ಗೆ ಸೇರಿಸಿದರೆ ನಮ್ಮ ಮಕ್ಕಳ ಮೇಲೆ ಶಿಕ್ಷಕ ಅತ್ಯಾಚಾರ ಎಸಗಿದ್ದಾನೆ ಎಂದು ತೀವ್ರ ಆಕ್ರೋಶ ಹೊರಹಾಕಿದರು.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಬಾಲಕಿಯರ ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದರು‌. ಈ ವೇಳೆ ಪೊಲೀಸರ ಕಾಲಿಗೆ ಬಿದ್ದು, ತಮ್ಮ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಕೇಳಿಕೊಂಡರು.

ಸದ್ಯ ಆರೋಪ ಕೇಳಿ ಬಂದಿರುವ ಶಿಕ್ಷಕನನ್ನು ಗೋಕಾಕ್​ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮಾಡುತ್ತಿದ್ದಾರೆ.



Ads on article

Advertise in articles 1

advertising articles 2

Advertise under the article