ಕಾರವಾರ :ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ: 25 ಕಾರ್ಮಿಕರ ರಕ್ಷಣೆ.
Monday, August 31, 2026

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟು ಸಮುದ್ರದಲ್ಲಿ ಮುಳುಗಡೆಯಾದ ಘಟನೆ ತಾಲೂಕಿನ ಅಂಜದೀವ್ ಬಳಿ ಸಂಭವಿಸಿದ್ದು ಬೋಟಿನಲ್ಲಿದ್ದ
25 ಕಾರ್ಮಿಕರನ್ನು ಸಮೀಪದಲ್ಲಿದ್ದ 4 ಬೋಟುಗಳು ತೆರಳಿ ರಕ್ಷಣೆ ಮಾಡಿವೆ.
ಅಂಕೋಲಾ ತಾಲೂಕಿನ ಬೆಳಂಬಾರದ ನೀಲಕಂಠ ಖಾರ್ವಿ ಎನ್ನುವವರಿಗೆ ಸೇರಿದ್ದ ಶ್ರೀಮಾತಾ
ಹೆಸರಿನ ಬೋಟು ನೀರಿನಲ್ಲಿ ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ಮೀನುಗಾರಿಕೆ ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿವೆ.
ಬೋಟ್ ಮುಳುಗಡೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ,ಅವಘಡದಿಂದ ಸುಮಾರು 75 ಲಕ್ಷಗಳಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಗೋಕರ್ಣದ ತದಡಿ ಬಳಿ ಎರಡು ಮೀನುಗಾರಿಕೆ ಬೋಟುಗಳು ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿತ್ತು.