ನೇಪಾಳ :ಸುರಂಗದಲ್ಲಿ 93 ಕಾರ್ಮಿಕರ ಪತ್ತೆಗೆ ಬಿಟ್ಟ ಡ್ರೋನ್‌ನಲ್ಲಿ ಸಿಕ್ಕಿದ ದೃಶ್ಯಗಳೇನು ಗೊತ್ತಾ?: ಕಣ್ಣೀರಲ್ಲಿ ಮುಳುಗಿದ ಕುಟುಂಬಸ್ಥರು!

ನೇಪಾಳ :ಸುರಂಗದಲ್ಲಿ 93 ಕಾರ್ಮಿಕರ ಪತ್ತೆಗೆ ಬಿಟ್ಟ ಡ್ರೋನ್‌ನಲ್ಲಿ ಸಿಕ್ಕಿದ ದೃಶ್ಯಗಳೇನು ಗೊತ್ತಾ?: ಕಣ್ಣೀರಲ್ಲಿ ಮುಳುಗಿದ ಕುಟುಂಬಸ್ಥರು!

ನೇಪಾಳ: ಭೋಟೆಕೋಶಿ ನದಿಯ ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾಗಿರುವ ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿರುವ 93 ಕಾರ್ಮಿಕರನ್ನು ಪತ್ತೆಹಚ್ಚಲು ನಡೆಸಿದ ಹೈಟೆಕ್ ಡ್ರೋನ್ ಕಾರ್ಯಾಚರಣೆಯೂ ವಿಫಲಗೊಂಡಿದೆ. ಪ್ರವಾಹದ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದರಿಂದ ನೇಪಾಳ ಸೇನೆಯು ಅತ್ಯಾಧುನಿಕ ಡ್ರೋನ್ ಬಳಸಿ ಪರಿಶೀಲನೆ ನಡೆಸಿತಾದರೂ, ಯಾರೊಬ್ಬರೂ ಬದುಕುಳಿದ ಅಥವಾ ಮೃತಪಟ್ಟಿರುವ ಸಣ್ಣ ಸುಳಿವು ಕೂಡ ಪತ್ತೆಯಾಗಿಲ್ಲ.

ಸುರಂಗದೊಳಗೆ ನುಗ್ಗಿರುವ ಕೆಸರು, ಕಲ್ಲು ಮತ್ತು ಬಂಡೆಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿರಬಹುದು ಎಂದು ಸೇನೆ ಸ್ಪಷ್ಟಪಡಿಸಿದ್ದು, ಡ್ರೋನ್ ಶೋಧದ ದೃಶ್ಯಗಳನ್ನು ಬಿಡುಗಡೆ ಮಾಡಿದೆ.

ರಸುವಾ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ತುತ್ತಾಗಿರುವ 11 ಜಲವಿದ್ಯುತ್ ಯೋಜನೆಗಳ ಒಟ್ಟು 933ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದು, ಸುರಂಗದೊಳಗೂ ಸುಳಿವು ಸಿಗದಿರುವುದು ಅವರ ಕುಟುಂಬಸ್ಥರನ್ನು ತೀವ್ರ ಕಣ್ಣೀರಲ್ಲಿ ಮುಳುಗಿಸಿದೆ.

 

Ads on article

Advertise in articles 1

advertising articles 2

Advertise under the article