ತೆಲಂಗಾಣ :ಮದುವೆ ಮನೆ ಡಿಜೆ ಸೌಂಡ್‌ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗಲೇ ಕುಸಿದು ವಿದ್ಯಾರ್ಥಿ ಸಾವು.

ತೆಲಂಗಾಣ :ಮದುವೆ ಮನೆ ಡಿಜೆ ಸೌಂಡ್‌ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗಲೇ ಕುಸಿದು ವಿದ್ಯಾರ್ಥಿ ಸಾವು.

ತೆಲಂಗಾಣ: ಮದುವೆಮನೆಯ DJ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ಪಿಯು ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿದ್ದಾನೆ.

ತಕ್ಷಣ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಸ್ನೇಹಿತನ ಮನೆಯ ಮದುವೆ ಸಂಭ್ರಮದಲ್ಲಿ DJ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಕೋಸ್ಗಿಯಲ್ಲಿ ನಡೆದಿದೆ.

ನಾರಾಯಣಪೇಟೆ ಜಿಲ್ಲೆಯ ಕೋಸ್ಗಿ ಪುರಸಭೆ ವ್ಯಾಪ್ತಿಯ ಪೊತಿರೆಡ್ಡಿಪಲ್ಲಿಗೆ ಸೇರಿದ ದಸ್ತಯ್ಯ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ರವಿತೇಜ (17) ಮೃತಪಟ್ಟ ವಿದ್ಯಾರ್ಥಿ. ರವಿತೇಜ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಸೋಮವಾರ ರಾತ್ರಿ ಸ್ನೇಹಿತನ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ರವಿತೇಜ ಅಲ್ಲಿಗೆ ತೆರಳಿದ್ದನು. ಸ್ನೇಹಿತರೆಲ್ಲರೂ ಸೇರಿ ಮದುವೆ ಸಂಭ್ರಮದಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದರು. ಈ ವೇಳೆ DJ ಹಾಡುಗಳಿಗೆ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದರು.

ಆದರೆ, ಡ್ಯಾನ್ಸ್ ಮಾಡುತ್ತಿದ್ದ ರವಿತೇಜ ಹಠಾತ್ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಸ್ನೇಹಿತರು ಹಾಗೂ ಸ್ಥಳೀಯರು ಆತನನ್ನು ಕೋಸ್ಗಿ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ರವಿತೇಜ ಈಗಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಸ್ನೇಹಿತರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕೆಲವೇ ಕ್ಷಣಗಳ ಹಿಂದೆ ತಮ್ಮೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವುದು ಎಲ್ಲರನ್ನೂ ಆಘಾತಕ್ಕೀಡುಮಾಡಿದೆ.

Ads on article

Advertise in articles 1

advertising articles 2

Advertise under the article