ಮಹಾರಾಷ್ಟ್ರ :ಕುಂಡಲಿ ದೋಷ ನಿವಾರಣೆ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಗರ್ಭಿಣಿಯಾದಾಗ ಬೆಳಕಿಗೆ ಬಂತು ನಕಲಿ ಸ್ವಾಮೀಜಿಯ ಘೋರ ಕೃತ್ಯ!

ಮಹಾರಾಷ್ಟ್ರ: ಭಕ್ತರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘೋರ ಘಟನೆ ಲಾತೂರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ‘ರಾಮೇಶ್ವರ್ ರಾಮದಾಸಿ ಮಹಾರಾಜ್’ ಎಂಬ ನಕಲಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಭೀಕರ ವಿವರಗಳು:
ಜಾತಕ ದೋಷದ ನೆಪ: ಲಾತೂರ್ ನಗರದ ಕುಟುಂಬವೊಂದು ತಮ್ಮ ಮಗಳ ಜನ್ಮ ಕುಂಡಲಿ ತಯಾರಿಸಲು ಈತನ ಬಳಿ ತೆರಳಿದ್ದಾಗ, ಜಾತಕದಲ್ಲಿ ‘ಕುಂಡಲಿ ದೋಷ’ವಿದ್ದು ವಿಶೇಷ ಪೂಜೆ ಮಾಡಬೇಕೆಂದು ನಕಲಿ ಬಾಬಾ ಪೋಷಕರನ್ನು ನಂಬಿಸಿದ್ದನು.
ಕೊಠಡಿಯೊಳಗೆ ದೌರ್ಜನ್ಯ: ಪೂಜೆ ನೆಪದಲ್ಲಿ ಬಾಲಕಿಯ ಮನೆಗೆ ಬಂದ ಆತ, ಮಂತ್ರ ಜಪಿಸುವ ನೆಪದಲ್ಲಿ ಪೋಷಕರನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದಾನೆ. ಬಳಿಕ ದೋಷ ನಿವಾರಣೆಗೆ ದೈಹಿಕ ಸಂಬಂಧ ಅಗತ್ಯವೆಂದು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಗರ್ಭಿಣಿಯಾದಾಗ ಬಯಲಾದ ಸತ್ಯ: ಬಾಲಕಿ ಗರ್ಭಿಣಿಯಾದಾಗ ಭಯಗೊಂಡು ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ತಕ್ಷಣವೇ ಲಾತೂರ್‌ನ ವಿವೇಕಾನಂದ ಚೌಕ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಬಂಧನ: ಪೊಲೀಸರು ಆರೋಪಿಯ ವಿರುದ್ಧ BNS, ಪೋಕ್ಸೋ (POCSO) ಮತ್ತು ಮಹಾರಾಷ್ಟ್ರ ಮೂಢನಂಬಿಕೆ ನಿರ್ಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ನ್ಯಾಯಾಲಯ ಆತನನ್ನು 4 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.