ಬೆಂಗಳೂರು :ದೇಶದಲ್ಲೇ ಮೂರನೇ ಸ್ಥಾನಕ್ಕೆ ತಲುಪಿದ ರಾಜ್ಯ; ಯುವಜನತೆಯಲ್ಲೇ ಹೆಚ್ಚುತ್ತಿದೆ ಭೀಕರ ಎಚ್‌ಐವಿ ಸೋಂಕು!

ಬೆಂಗಳೂರು :ದೇಶದಲ್ಲೇ ಮೂರನೇ ಸ್ಥಾನಕ್ಕೆ ತಲುಪಿದ ರಾಜ್ಯ; ಯುವಜನತೆಯಲ್ಲೇ ಹೆಚ್ಚುತ್ತಿದೆ ಭೀಕರ ಎಚ್‌ಐವಿ ಸೋಂಕು!

ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ಎಚ್‌ಐವಿ (HIV) ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷಕ್ಕೂ ಅಧಿಕ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ. 20-25ರಷ್ಟು ಸೋಂಕಿತರು ಅವಿವಾಹಿತರಾಗಿದ್ದಾರೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.

ಹೆಚ್ಚುತ್ತಿದೆ ಯುವಜನತೆಯಲ್ಲೇ ಸೋಂಕು:

18-25 ವಯೋಮಾನದ ಯುವಜನತೆಯಲ್ಲಿ ಎಚ್‌ಐವಿ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ (KSAPS) ನೀಡಿದ ಮಾಹಿತಿಯಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.

​ಜಿಲ್ಲಾವಾರು ಎಚ್‌ಐವಿ ಸೋಂಕಿತರ ವಿವರ (ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯ 7ನೇ ವರದಿ :

​ಬೆಂಗಳೂರು (GBA): 30,273

​ಬೆಳಗಾವಿ: 25,311

​ಬಾಗಲಕೋಟೆ: 20,389

​ಮೈಸೂರು: 12,713

​ವಿಜಯಪುರ: 12,171

​ರಾಯಚೂರು: 9,028

​ಧಾರವಾಡ: 7,889 | ಕಲಬುರಗಿ: 7,809 | ಮಂಡ್ಯ: 7,615 | ಕೊಪ್ಪಳ: 7,150

​ಬಳ್ಳಾರಿ: 6,593 | ಹಾಸನ: 5,869 | ದಕ್ಷಿಣ ಕನ್ನಡ: 5,540 | ಕೋಲಾರ: 5,495

​ಚಿತ್ರದುರ್ಗ: 5,287 | ವಿಜಯನಗರ: 5,203 | ದಾವಣಗೆರೆ: 5,180 | ಹಾವೇರಿ: 5,006

​ಬೀದರ್: 4,852 | ಗದಗ: 4,761 | ಉಡುಪಿ: 4,661 | ಯಾದಗಿರಿ: 4,431

​ಶಿವಮೊಗ್ಗ: 4,308 | ಚಾಮರಾಜನಗರ: 3,559 | ಚಿಕ್ಕಮಗಳೂರು: 3,290 | ಬೆಂಗಳೂರು ದಕ್ಷಿಣ: 3,138

​ಬೆಂಗಳೂರು ಗ್ರಾಮಾಂತರ: 3,126 | ಉತ್ತರ ಕನ್ನಡ: 2,585 | ಕೊಡಗು: 1,520

ನಿಯಂತ್ರಣಕ್ಕೆ ಸವಾಲು ಹಾಗೂ ಸರ್ಕಾರದ ಕ್ರಮಗಳು:

2017ರ ಎಚ್‌ಐವಿ/ಏಡ್ಸ್ ಕಾಯ್ದೆಯಡಿ ತಪಾಸಣೆಯನ್ನು ಕಡ್ಡಾಯಗೊಳಿಸುವಂತಿಲ್ಲ ಹಾಗೂ ಸ್ವಯಂಪ್ರೇರಿತ ಪರೀಕ್ಷೆಗೆ ಮಾತ್ರ ಅವಕಾಶವಿದೆ. ಜೊತೆಗೆ ಎಆರ್‌ಟಿ (Anti-Retroviral Therapy) ಚಿಕಿತ್ಸೆಯು ಸೋಂಕನ್ನು ನಿಯಂತ್ರಿಸುತ್ತದೆಯೇ ಹೊರತು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಹೀಗಾಗಿ, ಸೋಂಕು ತಡೆಗಟ್ಟಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ವಿದ್ಯಾರ್ಥಿಗಳಿಗೆ ತಪಾಸಣೆ ಮತ್ತು ಜಾಗೃತಿ ಶಿಬಿರ ಆಯೋಜಿಸಲು ಸೂಚಿಸಿದೆ. ಅಲ್ಲದೆ, ಚಿತ್ರಮಂದಿರಗಳಲ್ಲಿ ಸಂದೇಶ ಪ್ರಸಾರ ಹಾಗೂ 1,756 ರೆಡ್ ರಿಬ್ಬನ್ ಕ್ಲಬ್‌ಗಳ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ

Ads on article

Advertise in articles 1

advertising articles 2

Advertise under the article