ಬೆಂಗಳೂರು :ಮನೆಯ ಪಕ್ಕದ ಶೆಡ್‌ನಲ್ಲಿ ಶುರುವಾದ ಉದ್ಯಮ: ಜಾಗತಿಕ ಮಟ್ಟದಲ್ಲಿ ಕೋಟಿ ಕೋಟಿ ಸದ್ದು ಮಾಡುತ್ತಿರೋ ಈ ಮಹಿಳೆಯ ಐಡಿಯಾ ಏನು?

ಬೆಂಗಳೂರು :ಮನೆಯ ಪಕ್ಕದ ಶೆಡ್‌ನಲ್ಲಿ ಶುರುವಾದ ಉದ್ಯಮ: ಜಾಗತಿಕ ಮಟ್ಟದಲ್ಲಿ ಕೋಟಿ ಕೋಟಿ ಸದ್ದು ಮಾಡುತ್ತಿರೋ ಈ ಮಹಿಳೆಯ ಐಡಿಯಾ ಏನು?

​ಬೆಂಗಳೂರು: ತೆಂಗಿನಕಾಯಿ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ಅಡುಗೆ, ಚಟ್ನಿ ಅಥವಾ ಎಳನೀರು. ಆದರೆ ಕೇರಳದ ಸುಮಿಲಾ ಜಯರಾಜ್ ಎಂಬ ಗೃಹಿಣಿಗೆ ಇದೇ ತೆಂಗಿನಕಾಯಿ ಒಂದು ದೊಡ್ಡ ಉದ್ಯಮ ಕಟ್ಟುವ ಅವಕಾಶವಾಗಿ ಕಂಡಿತು. ಮನೆಯ ಪಕ್ಕದ ಸಣ್ಣ ಶೆಡ್‌ನಿಂದ ಆರಂಭವಾದ ಅವರ ನಿಸ್ವಾರ್ಥ ಪ್ರಯತ್ನ, ಇಂದು ‘Greenaura’ ಎಂಬ ಜಾಗತಿಕ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ತಿಂಗಳಿಗೆ ಸರಾಸರಿ ₹20 ಲಕ್ಷ ಮಾರಾಟ ಕಾಣುತ್ತಿದೆ.

ಉದ್ಯಮಕ್ಕೆ ಪ್ರೇರಣೆ ಹಾಗೂ ಟರ್ನಿಂಗ್ ಪಾಯಿಂಟ್:

ಕೇರಳದ ಎಂಗಂಡಿಯೂರಿನ ಸುಮಿಲಾ ಅವರು ಪ್ರಾಣಿಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದ್ದರು. ಮದುವೆಯ ನಂತರ ಮುಂಬೈ ತಲುಪಿ, ಮಕ್ಕಳು ದೊಡ್ಡವರಾದ ಮೇಲೆ ತಮ್ಮದೇ ಆದ ಸ್ವಂತ ಗುರುತು ರೂಪಿಸಿಕೊಳ್ಳಬೇಕೆಂಬ ಆಸೆ ಮೂಡಿತು. ಈ ವೇಳೆ ವರ್ಜಿನ್ ಕೊಕನಟ್ ಆಯಿಲ್ ತಯಾರಿಸುವ ಸ್ಥಳೀಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಸುಮಿಲಾ, ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ ವ್ಯವಹರಿಸಿ ಲಂಡನ್‌ನಿಂದ ಮೊದಲ ರಫ್ತು ಆರ್ಡರ್ ದೊರಕಿಸಿಕೊಟ್ಟರು. ಈ ಅನುಭವವೇ ಮುಂದೆ ಅವರ ಸ್ವಂತ ಉದ್ಯಮಕ್ಕೆ ದಾರಿಯಾಯಿತು.

ಸಣ್ಣ ಶೆಡ್‌ನಿಂದ ಜಾಗತಿಕ ಮಾರುಕಟ್ಟೆಗೆ:

ಅನುಭವ ಗಳಿಸಿದ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ, ಮನೆಯ ಪಕ್ಕದ ಸಣ್ಣ ಶೆಡ್‌ನಲ್ಲಿ ‘ಸೆಂಟ್ರಿಫ್ಯೂಗಲ್’ ವಿಧಾನ ಬಳಸಿ ವರ್ಜಿನ್ ಕೊಕನಟ್ ಆಯಿಲ್ ತಯಾರಿಸಲು ಶುರು ಮಾಡಿದರು. ಸಾಲದ ಕೊರತೆ ಹಾಗೂ ಮಾರುಕಟ್ಟೆಯ ಸವಾಲುಗಳನ್ನು ಮೀರಿ 2021ರಲ್ಲಿ ‘Greenaura’ ಬ್ರ್ಯಾಂಡ್ ಅಧಿಕೃತವಾಗಿ ಆರಂಭಿಸಿದರು.

​ಇಂದು ವರ್ಜಿನ್ ಕೊಕನಟ್ ಆಯಿಲ್ ಜೊತೆಗೆ ತೆಂಗಿನಕಾಯಿ ಆಧಾರಿತ ಚಟ್ನಿ, ಉಪ್ಪಿನಕಾಯಿ, ಕೊಕನಟ್ ಮಿಲ್ಕ್ ಪೌಡರ್ ಹಾಗೂ ಸಾಂಬಾರ್ ಪೌಡರ್‌ಗಳನ್ನು ಉತ್ಪಾದಿಸುತ್ತಿದ್ದು, ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಮಲೇಷ್ಯಾಗೂ ರಫ್ತು ಮಾಡುತ್ತಿದ್ದಾರೆ. ಸ್ಥಳೀಯ ಸಂಪನ್ಮೂಲಕ್ಕೆ ಮೌಲ್ಯವರ್ಧನೆ (Value Addition) ನೀಡಿ ಜಾಗತಿಕ ಮಟ್ಟ ಬೆಳೆದ ಸುಮಿಲಾ ಅವರ ಸಾಧನೆ ಕೋಟ್ಯಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

 

Ads on article

Advertise in articles 1

advertising articles 2

Advertise under the article