ಬೆಂಗಳೂರು :2026ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ!

ಬೆಂಗಳೂರು :2026ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ!

ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 71 ಮಂದಿ ಸಾಧಕರನ್ನು ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

​ಪ್ರಶಸ್ತಿಯು ₹5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.

​2026ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ:

​* ಜಾನಪದ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಶಿವಲಿಂಗಪ್ಪ ತಂದೆ ರಾಮಣ್ಣ (ಕೊಪ್ಪಳ), ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ).

​* ಸಂಗೀತ: ಡಾ. ಸಿ.ಎ. ಶ್ರೀಧರ್ (ಮೈಸೂರು), ಡಾ. ಎ. ನಾರಾಯಣಸ್ವಾಮಿ (ಹಾಸನ), ಬಿ. ಮುರುಳಿ (ಬೆಂಗಳೂರು ಗ್ರಾಮಾಂತರ).

​* ನೃತ್ಯ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ).

​* ಚಲನಚಿತ್ರ ಹಾಗೂ ಕಿರುತೆರೆ: ಬಾಬಜೀ ವೆಂಕಟರಮಣ (ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ).

​*ಯಕ್ಷಗಾನ ಹಾಗೂ ಬಯಲಾಟ: ಗೋಪಾಲ ಗಾಣಿಗ (ಉಡುಪಿ), ಹುಲಿಗೆಮ್ಮ (ಬಳ್ಳಾರಿ).

​* ರಂಗಭೂಮಿ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಹೊನ್ನ ನಾಯಕ್ (ಮೈಸೂರು).

​* ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ: ಜಿ.ವಿ. ಹಂಸಾನಂದ ಆಚಾರ್ಯ (ವಿಜಯನಗರ), ಕಾಡಪ್ಪ (ಬೆಳಗಾವಿ), ಸಿ.ಬಿ. ಸೋಮಶೆಟ್ಟಿ (ಬೀದರ್), ಶಾಂತಾಬಾಯಿ ಮೋಹನ್ ಕಾಂಬಳೆ (ಬೀದರ್).

​* ಕೃಷಿ ಹಾಗೂ ಪರಿಸರ: ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಬೆಂಗಳೂರು ನಗರ), ಡಾ. ಸ್ವಾಮಿ ಆನಂದ್ ಆರ್. (ಮೈಸೂರು).

​* ವಿಜ್ಞಾನ ಮತ್ತು ತಂತ್ರಜ್ಞಾನ: ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಕೆನಡಾ).

​* ಮಾಧ್ಯಮ ಹಾಗೂ ಛಾಯಾಚಿತ್ರ: ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲ (ಬೆಂಗಳೂರು ನಗರ), ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ).

​* ಸಂಕೀರ್ಣ: ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ (ಬಾಗಲಕೋಟೆ), ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು ನಗರ), ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ – ವಾಸ್ತುಶಾಸ್ತ್ರ), ರವಿ ಪ್ರವೀಣ್ ನೊರೋನಾ (ಬೆಂಗಳೂರು ನಗರ), ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿಡ್ಡಪ್ಪ (ಕೊಡಗು), ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ).

​* ಸಮಾಜಸೇವೆ: ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ (ಗದಗ), ಬಸವರಾಜು (ಮಂಡ್ಯ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಡಾ. ಎಸ್.ಎಂ. ಎಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣೇಗೌಡ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ), ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).

​* ವೈದ್ಯಕೀಯ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು ನಗರ), ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ).

​* ಆಡಳಿತ ಹಾಗೂ ಇಂಜಿನಿಯರಿಂಗ್: ತೆರೆಸಾ ಭಟ್ಟಾಚಾರ್ಯ (ಬೆಂಗಳೂರು ನಗರ), ಡಾ. ಕೆ.ಎಸ್. ಸೋಮಶೇಖರ್ (ಹೊರನಾಡು), ಡಾ. ಕೆ.ಎನ್. ವೆಂಕಟಕೃಷ್ಣರಾವ್ (ಚಿಕ್ಕಬಳ್ಳಾಪುರ).

​* ಸಾಹಿತ್ಯ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ಪ್ರೊ. ನಾರಾಯಣಘಟ್ಟ (ತುಮಕೂರು), ಸಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರೀಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ).

​* ಶಿಕ್ಷಣ: ಫಾ. ಜೋಸೆಫ್ (ಬೆಂಗಳೂರು ನಗರ), ಶಾಂತಪ್ಪ ದಶವಂತ (ವಿಜಯಪುರ), ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ), ಡಾ. ಎನ್.ಎಸ್. ರಂಗರಾಜು (ಮೈಸೂರು).

​* ನ್ಯಾಯಾಂಗ: ಬಿ.ವಿ. ಆಚಾರ್ಯ (ಉಡುಪಿ).

* ​ಹೊರನಾಡು/ಹೊರದೇಶ: ರಮೇಶ್ ಗೌಡ (ಅಮೆರಿಕ).

​* ಕ್ರೀಡೆ: ಜಿಮ್ ರವಿ (ಕೋಲಾರ), ಡಾ. ಎ.ಬಿ. ಸುಬ್ಬಯ್ಯ (ಕೊಡಗು), ಎಂ. ಗಿರೀಶ್ (ಬೆಂಗಳೂರು ನಗರ).

 


Ads on article

Advertise in articles 1

advertising articles 2

Advertise under the article