ಬೆಂಗಳೂರು :ವೈದ್ಯಲೋಕದ ಸವಾಲು ತಲೆನೋವು !ಮೈಗ್ರೇನ್ ! ಮೈಗ್ರೇನ್..!!ಮೈಗ್ರೇನ್ ಗೆ ಶಾಶ್ವತ ಔಷಧಿ ಅಥವಾ ಚಿಕಿತ್ಸೆ ಇಲ್ಲವೇ?
Thursday, October 29, 2026
ಬೆಂಗಳೂರು :ವೈದ್ಯಲೋಕದ ಸವಾಲು ತಲೆನೋವು !
ಯುವತಿಯರು,ಮಹಿಳೆಯರು ಪ್ರತಿ ನಿತ್ಯ ಅನುಭವಿಸುವ ಒಂದೇ ಒಂದು ನೋವು ,ಅದು #ತಲೆನೋವು. ಐದನೆ ತರಗತಿಯ ವಿದ್ಯಾರ್ಥಿನಿಯೂ ತಲೆನೋವು ಸಮಸ್ಯೆಯಿಂದ ಬಳಲುವುದು. ಅದರಲ್ಲಿ ಕೆಲವರಿಗಂತೂ ದಿನಾ ಬೆಳಿಗ್ಗೆ,ಸಂಜೆ ತಲೆ ನೋವು. ಅಂತಿಂಥ ನೋವಲ್ಲ ಅದು ತಡೆದುಕೊಳ್ಳುವುದಕ್ಕಾಗದ ತಲೆನೋವು.
#ಮೈಗ್ರೇನ್ ! ಮೈಗ್ರೇನ್..!!
ಒಬ್ಬೊಬ್ಬ ವೈದ್ಯ ಒಂದೊಂದು ಬಗೆಯ ಚಿಕಿತ್ಸೆ ಮಾಡುವುದು ಮತ್ಕು ನೋವು ಮರೆಸುವ ಮಾತ್ರೆ ಕೊಡುವುದು .ಇನ್ನು ದೊಡ್ಡ ವೈದ್ಯ,ದೊಡ್ಡ ಆಸ್ಪತ್ರೆಗೆ ಹೋದಾಗ ಎಲ್ಲ ಪರೀಕ್ಷೆ,ಎಲ್ಲ ಆಧುನಿಕ ಎಕ್ಸರೇ, ಎಲ್ಲ ಬಗೆಯ ರಕ್ತ ಪರೀಕ್ಷೆ ಮಾಡಿಸಿ ಆಸ್ಪತ್ರೆಗೆ,ಪ್ರಯೋಗಾಲಯಗಳಿಗೆ ಎಲ್ಲರಿಗೂ ಎಂದು ಹದಿನೈದರಿಂದ ಇಪ್ಪತ್ತು ಸಾವಿರ ಖರ್ಚು ಮಾಡಿಸಿ ಅವರು ತೃಪ್ತರಾಗುತ್ತಾರೆ. ಅವರ ಪ್ರಕಾರ ಸರಾಗವಾಗಿ ಮಾತ್ರೆ ನುಂಗುತ್ತ ದಿನಗಳೆದರೂ ನೋವು ಅಂತ್ಯವಾಗುವುದಿಲ್ಲ.ಇನ್ನೊಬ್ಬ ತಜ್ಞ ಮತ್ತು ದೊಡ್ಡ ಆಸ್ಪತ್ರೆಗೆ ಹೋಗುವುದು.ಅಲ್ಲಿ ಕೂಡಾ ಪ್ರಾರಂಭದಿಂದಲೇ ಎಲ್ಲ ಪರೀಕ್ಷೆ ಇತ್ಯಾದಿಯಾಗಿ ಹದಿನೈದು -ಇಪ್ಪತ್ತು ಸಾವಿರ ಕೀಳುವುದು.
ಅಂತೂ ಪ್ರತಿಯೊಬ್ಬ ವೈದ್ಯ,ತಜ್ಞ ವೈದ್ಯ #ಮೈಗ್ರೇನ್ ಎನ್ನುವುದನ್ನು ತಪ್ಪದೆ ಹೇಳುತ್ತಾರೆ .
ಅದೊಂದು ನಿರಂತರ ಪ್ರಕ್ರಿಯೆ ಆಗಿದೆ. ಹಾಗೆ ತಲೆನೋವು ಅನುಭವಿಸುತ್ತ ಇದ್ದಕ್ಕಿದ್ದಂತೆ ವಿಪರೀತಕ್ಕೆ ತಲುಪಿ ಅಸುನೀಗುವುದು.ಅದೇ ಪರಿಹಾರ ಹೊರತು ಬೇರೇನೂ ವೈದ್ಯಕೀಯ ಪರಿಹಾರವೇ ಇಲ್ಲ.
ಆಹಾರ ಪದ್ಧತಿ,ಮೊಬೈಲು,ಟಿ. ವಿ, ಯೋಚನಾ ಲಹರಿ , ನಲವತ್ತೈದು ದಾಟಿದ ನಂತರ ಹಾಗೇ ಇರುತ್ತದೆ ಅದೇ ಮುಂತಾದ್ದನ್ನು ಕಾರಣ ಎನ್ನುತ್ತ ಮದ್ದು ಕೊಟ್ಟು ಕೈತೊಳೆದುಕೊಳ್ಳುವ ವೈದ್ಯಲೋಕಕ್ಕೆ ಈ ತಲೆನೋವು ಎಂಬ ಸಾಂಕ್ರಾಮಿಕ ರೋಗವು ದುಡ್ಡಿನ ಮರವಾಗಿದೆ ಅನ್ನಬಹುದೇನೊ!
ಆ #ಮೈಗ್ರೇನ್ ಎನ್ನುವ ಸಂಕ್ಷಿಪ್ತ ಪದದ ತಲೆನೋವಿಗೆ ,ಅದರಲ್ಲೂ ಬೇರೆ ಬೇರೆ ನಮೂನೆಯ #ಮೈಗ್ರೇನ್ ಗೆ ಶಾಶ್ವತ ಔಷಧಿ ಅಥವಾ ಚಿಕಿತ್ಸೆ ಇಲ್ಲವೇ?
ಹಾಗೆ ತಲೆನೋವಿಗೆ ಸುಧೀರ್ಘ ಔಷಧಿ ತಗೊಂಡು ತಗೊಂಡು ಕೊನೆಗೊಂದು ದಿನ #ಕಿಮೊಥೆರಪಿ ಮಾಡಿಸಿ ಎನ್ನುವ ಮಾತು ವೈದ್ಯರಿಂದ ಬರುತ್ತದೆ. ಮುಂದಿನ ಭವಿಷ್ಯ ಬರೆಯುವಂತಿಲ್ಲ.
ಇನ್ನು ಕೆಲವರುಗೆ #ಸೀರಿಯಸ್ ತಲೆನೋವು! ರಾಜಧಾನಿಯ ಆಸ್ಪತ್ರೆಗೆ ದಾಖಲು! ಅಲ್ಲಿ #ಮೆದುಳುನಿಷ್ಕ್ರಿಯೆ !
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 28 ವರ್ಷದ ಶ್ವೇತಾ ರವರು ತೀವ್ರ ತಲೆನೋವಿನಿಂದ ಬಳಳುತ್ತಿದ್ದರು, ನುರಿತ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು.