ಶಿವಮೊಗ್ಗ: ಕುರಿ ಶೆಡ್​ಗೆ ಆಕಸ್ಮಿಕ ಬೆಂಕಿ, 300ಕ್ಕೂ ಹೆಚ್ಚು ಕುರಿ, ಕೋಳಿಗಳು ಸಜೀವ ದಹನ.

ಶಿವಮೊಗ್ಗ: ಕುರಿ ಶೆಡ್​ಗೆ ಆಕಸ್ಮಿಕ ಬೆಂಕಿ, 300ಕ್ಕೂ ಹೆಚ್ಚು ಕುರಿ, ಕೋಳಿಗಳು ಸಜೀವ ದಹನ.

Shivamogga: Accidental fire in a sheep shed; 150 sheep and chickens burnt alive
ಶಿವಮೊಗ್ಗ: ಕುರಿ ಶೆಡ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಶೆಡ್​ನಲ್ಲಿದ್ದ 150ಕ್ಕೂ ಹೆಚ್ಚು ಕುರಿ ಹಾಗೂ 150ಕ್ಕೂ ಅಧಿಕ ಕೋಳಿಗಳು ಸಜೀವ ದಹನವಾಗಿರುವ ಘಟನೆ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಗ್ರಾಮದ ರಾಮಣ್ಣ ಎಂಬವರಿಗೆ ಸೇರಿದ ಕುರಿ ಶೆಡ್‌ನಲ್ಲಿ ಘಟನೆ ಸಂಭವಿಸಿದೆ. ಕುರಿ ಮತ್ತು ಕೋಳಿ ಸಾಕಲು ಒಂದೇ ಶೆಡ್​ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ ಶೆಡ್​ಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಾಗ ಶೆಡ್​ಗೆ ಬೀಗ ಹಾಕಲಾಗಿತ್ತು. ಇದರಿಂದ ಕುರಿಗಳು ಹೊರಗೆ ಓಡಿ ಬರಲಾಗದೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿವೆ. ಬೆಂಕಿಗೆ ಕೋಳಿಗಳೂ ಸುಟ್ಟು ಕರಕಲಾಗಿವೆ ಎಂದು ರಾಮಣ್ಣ ಬೇಸರ ತೋಡಿಕೊಂಡಿದ್ದಾರೆ.

ರಾಮಣ್ಣ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಬೆಂಕಿ ಬಿದ್ದ ಪರಿಣಾಮ ಶೆಡ್​ನಲ್ಲಿದ್ದ 150ಕ್ಕೂ ಅಧಿಕ ಕುರಿ ಹಾಗೂ 150ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಎಷ್ಟು ಕುರಿ ಹಾಗೂ ಎಷ್ಟು ಕೋಳಿಗಳು ಸತ್ತಿವೆ ಎಂಬ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ ಎಂದು ಆನವಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಈಟಿವಿ ಭಾರತಕ್ಕೆ ದೂರವಾಣಿಯಲ್ಲಿ ತಿಳಿಸಿದರು.

Ads on article

Advertise in articles 1

advertising articles 2

Advertise under the article