ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಿಂದ ಐತಿಹಾಸಿಕ ಯೋಜನೆ - ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ಇನ್ಮುಂದೆ ಸಿಗಲಿದೆ ಅಮೃತ ಪಾನ

ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಿಂದ ಐತಿಹಾಸಿಕ ಯೋಜನೆ - ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ಇನ್ಮುಂದೆ ಸಿಗಲಿದೆ ಅಮೃತ ಪಾನ

 



ತಾಯಿಯ ಎದೆ ಹಾಲು ಅಮೃತ ಸಮಾನವಾದ ಪಾನ ಎಂಬ ಮಾತು ಜನಜನಿತ. ಆದ್ರೆ ಇಂದಿಗೂ ಅದೆಷ್ಟೋ ಕಾರಣದಿಂದ ನವಜಾತ ಶಿಶುಗಳು ತಾಯಿ ಎದೆಹಾಲಿನಿಂದ ವಂಚಿತರಾಗುತ್ತಿದ್ದಾರೆ. ಆದ್ರೆ ಈ ರೀತಿಯಾಗಬಾರದು ಎಂಬ ಕಾರಣಕ್ಕೆ ಇದೀಗ ಮಂಗಳೂರಿನ ಪ್ರಸಿದ್ದ ಸರ್ಕಾರಿ ಹೆರಿಗೆ ಆಸ್ಪತ್ಪೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್(Human Milk Bank)ತೆರೆಯುವ ಎಲ್ಲಾ ತಯಾರಿ ನಡೆದಿದೆ.


ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಪ್ರಸಿದ್ದ ಹೆರಿಗೆ ಆಸ್ಪತ್ರೆ. 7ಕ್ಕೂ ಅಧಿಕ ಜಿಲ್ಲೆಯ ತಾಯಿಯಂದಿರು ಅವಲಂಬಿಸಿರುವ ಈ ಆಸ್ಪತ್ರೆಯಲ್ಲಿ ತಿಂಗಳೊಂದರಲ್ಲೇ ಸುಮಾರು 700ಕ್ಕೂ ಅಧಿಕ ಹೆರಿಗೆಯಾಗುತ್ತೆ. ಇದೀಗ ಈ ಆಸ್ಪತ್ರೆಯಲ್ಲಿ ಮಹತ್ವದ ಯೋಜನೆಯೊಂದು ಸಾಕಾರಗೊಳ್ಳಲು ತಿಂಗಳುಗಳಷ್ಟೇ ಬಾಕಿಯಿದೆ.



ಈ ಬಗ್ಗೆ  ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ದುರ್ಗಾಪ್ರಸಾದ್ ಎಂ.ಆರ್ ಮಾಹಿತಿ ನೀಡಿ 'ರೋಟರಿ ಕ್ಲಬ್ ಸಹಯೋಗದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯುವುದಕ್ಕೆ ಇಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಸುಮಾರು 45 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣ, ಸಲಕರಣೆ ಬಳಸಿಕೊಂಡು ಈ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯಲಾಗುತ್ತೆ. ಇದರಿಂದ ಅವಧಿಪೂರ್ವ ಜನಿಸಿದ, ತಾಯಿ ಕಳೆದುಕೊಂಡ, ತಾಯಿಯ ಎದೆ ಹಾಲು ಕೊರತೆಯಿರುವ ನವಜಾತ ಶಿಶುಗಳಿಗೆ ಅಮೃತ ಪಾನ ಲಭ್ಯವಾಗಲಿದೆ' ಎಂದರು.




ಪ್ರಸಕ್ತ ಹೆರಿಗೆಗಳಲ್ಲಿ 30 ಶೇಕಡಾ ನವಜಾತ ಶಿಶುಗಳು ಅವಧಿಪೂರ್ವ ಜನನವಾಗುತ್ತಿದೆ. ಹೀಗಾಗಿ ಇಂತಹ ಮಕ್ಕಳಿಗೆ ಪ್ರತಿರೋಧ ಶಕ್ತಿ ಕಡಿಮೆಯಿದ್ದು ಎನ್.ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಿ ಉಳಿಸುವ ಭಗೀರಥ ಪ್ರಯತ್ನವನ್ನು ವೈದ್ಯಾಧಿಕಾರಿಗಳು ಮಾಡುತ್ತಾರೆ. ಈ ಸಂದರ್ಭ ಮಗುವಿಗೆ ತಾಯಿಯ ಎದೆ ಹಾಲು ಅವಶ್ಯವಾಗಿದ್ದು, ಇಂತಹ ನವಜಾತ ಶಿಶುಗಳಿಗೆ ಮಿಲ್ಕ್ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಎದೆಹಾಲನ್ನು ನೀಡಿದ್ರೆ ಅಮೃತದ ಶಕ್ತಿ ಬರುತ್ತದೆ. ತಾಯಿಯ ಎದೆಹಾಲಿನಲ್ಲಿ ಲವಣಾಂಶ, ಪ್ರೋಟೀನ್, ಶಕ್ಕರಪಿಷ್ಠ, ಫ್ಯಾಟ್, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ ಅತ್ಯಧಿಕವಾಗಿದ್ದು ಇದು ಶಿಶುವಿನ ಉಳಿಯುವುಕಿಗೆ ಅಮೃತವಾಗಲಿದೆ. ಮೊದಲಿಗೆ ಉಪಕರಣ ಬಳಸಿ ಎದೆಹಾಲು ಡೋನೆಟ್ ಮಾಡುವ ತಾಯಿಯಿಂದ ಪಂಪ್ ಮಾಡಿ ಪ್ಯಾಶ್ಚುರೈಸೇಶನ್ ಪ್ರಕ್ರಿಯೆ ಮಾಡಿ ಆ ಬಳಿಕ ಶೀತಲಿಕರಣ ಮಾಡಿ ಎದೆಹಾಲು ಸಂಗ್ರಹಿಸಲಾಗುತ್ತದೆ.


ತಾಯಿ ಎದೆಹಾಲು ಅವಶ್ಯಕವಿರುವ ನವಜಾತ ಶಿಶುಗಳಿಗೆ ಇದರಿಂದ ಸಾಕಷ್ಟು ಉಪಯೋಗವಾಗಲಿದೆ. ಹೀಗಾಗಿ ತಾಯಂದಿರಿಗೆ ಎದೆಹಾಲಿನ ಮಹತ್ವವನ್ನು ತಿಳಿಸಿ ಎದೆ ಹಾಲು ದಾನವನ್ನು ಮಾಡುವಂತ ಪ್ರೇರಣಾ ಕಾರ್ಯಗಳನ್ನು ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಬಹಳ ಅಪರೂಪವಾದ ಈ ಹ್ಯೂಮನ್ ಮಿಲ್ಕ್ ಬ್ಯಾಂಕ್ ಯೋಜನೆ ನಿಜಕ್ಕೂ ಶ್ಲಾಘನೀಯ.

Ads on article

Advertise in articles 1

advertising articles 2

Advertise under the article