ಮಂಗಳೂರಿನ ಒಂದೇ ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳು-ಇಲ್ಲಿನ ಶಿಕ್ಷಕರು ಮಕ್ಕಳನ್ನು ನೋಡಿ ಆಗಿದ್ದಾರೆ ಫುಲ್ ಕನ್‌ಪ್ಯೂಸ್

ಮಂಗಳೂರಿನ ಒಂದೇ ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳು-ಇಲ್ಲಿನ ಶಿಕ್ಷಕರು ಮಕ್ಕಳನ್ನು ನೋಡಿ ಆಗಿದ್ದಾರೆ ಫುಲ್ ಕನ್‌ಪ್ಯೂಸ್


ಸಾಮಾನ್ಯವಾಗಿ ಶಾಲೆಯಲ್ಲಿ ಒಂದೆರಡು ಅವಳಿ ಜೋಡಿ ಮಕ್ಕಳನ್ನು ನೀವು ನೋಡಿರ್ತಿರಿ. ಆದ್ರೆ ಕಡಲನಗರಿ ಮಂಗಳೂರಿನಲ್ಲಿ ಹನ್ನೊಂದು ಜೋಡಿ ಅವಳಿ ಮಕ್ಕಳಿರುವ ಶಾಲೆಯೊಂದು ವಿಶೇಷತೆಗೆ ಸಾಕ್ಷಿಯಾಗಿದೆ. ಕಾಕತಾಳಿಯ ಎಂಬಂತೆ ಈ ಶಾಲೆಯ ಹೆಸರು ಸಹ ಅವಳಿಯಾಗಿಯೇ ಇದೆ.


ಹೌದು..ಅದು ಮಂಗಳೂರು ನಗರ ಹೊರವಲಯದ ಕೈರಂಗಳ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾಕೇಂದ್ರ. ಎಲ್.ಕೆ.ಜಿ ಯಿಂದ ಹಿಡಿದು ಪಿಯಸಿ ತನಕ ತರಗತಿಗಳಿರುವ ಈ ಶಾಲೆ ಇದೀಗ ದಾಖಲೆಯ ಅವಳಿ ಜೋಡಿ ಮಕ್ಕಳ ಮೂಲಕ ಸುದ್ದಿಯಾಗಿದೆ. ಈ ಶಾಲೆಯಲ್ಲಿ 11 ಅವಳಿ ಮಕ್ಕಳ ಜೋಡಿ ಈಗ ಮೋಡಿ ಮಾಡುತಿದ್ದು, ಇದರಲ್ಲಿ 4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಜೋಡಿ, 6,7,8ನೇ ತರಗತಿಯಲ್ಲಿ ತಲಾ ಒಂದು ಜೋಡಿ, ದ್ವಿತೀಯ ಪಿ.ಯು.ಸಿಯಲ್ಲಿ ಎರಡು ಜೋಡಿ ಅವಳು ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳು ರಜೆ ಮುಗಿಸಿ ಶಾಲೆಗೆ ಬಂದಾಗ ಇವರನ್ನು ಗುರುತಿಸುವುದಕ್ಕೂ ಶಿಕ್ಷಕರು ಕನ್ಪ್ಯೂಸ್ ಆಗ್ತಿದ್ದಾರೆ.

'ಮಕ್ಕಳು ಕಲಿಯುತ್ತಿರುವ ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 8 ಜೋಡಿ ಅವಳಿ ಮಕ್ಕಳಿದ್ದರು. ಈ ಬಾರಿ ಈ ಅವಳಿ ಜೋಡಿ ಮಕ್ಕಳ ಸಂಖ್ಯೆ 11ಕ್ಕೆ ಏರಿದೆ. ಈ ದಾಖಲೆ ಸಂಖ್ಯೆಯ ಅವಳಿ ಜೋಡಿ ಮಕ್ಕಳಿಂದ ಹಾಸ್ಯಮಯ ಸಂಗತಿಗಳು ಸಹ ಆಗಾಗ ಶಾಲೆಯಲ್ಲಿ ನಡೆಯುತ್ತೆ. ಅವಳಿ ಜೋಡಿಯ ಪೈಕಿ ಒಬ್ಬರ ಬಳಿ ಹೇಳಬೇಕಾದ ವಿಷಯವನ್ನು ಶಿಕ್ಷಕರು ಇನ್ನೊಬ್ಬರನ್ನು ಕರೆದು ಹೇಳಿದಂತ ಪ್ರಸಂಗವು ನಡೆದಿದೆ. ಒಬ್ಬರ ಹೆಸರನ್ನು ಇನ್ನೊಬ್ಬರಿಗೆ ಕರೆದ ಉದಾಹರಣೆಯು ಇದೆ. ಇನ್ನು ಕಾಕತಾಳೀಯ ಎಂಬಂತೆ ಈ ಶಾಲೆಯ ಹೆಸರು ಸಹ ವಿದ್ಯಾ ಗಣಪತಿ ಎಂದು ಅವಳಿ ಹೆಸರನ್ನು ಹೊಂದಿದೆ' ಎನ್ನುತ್ತಾರೆ ಶಾರದಾ ಗಣಪತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀಹರಿ.


ಸಾಮಾನ್ಯವಾಗಿ ನಮ್ಮ ಸುತ್ತಲಿನ ಪರಿಸರದಲ್ಲೇ ಅವಳಿ ವ್ಯಕ್ತಿಗಳಿದ್ದರೆ ಏಕಾಏಕಿ ದೊಡ್ಡವರು ಯಾರು ಸಣ್ಣವರು ಯಾರು ಎಂದು ಗುರುತಿಸುವುದು ಕಷ್ಟವಾಗುತ್ತೆ. ಹೀಗಾಗಿ ಅವಳಿ ಜೋಡಿ ಮಕ್ಕಳು ತಮ್ಮನ್ನು ವಿಶೇಷವಾಗಿ ಗುರುತಿಸಿರೋದಕ್ಕೆ ಖುಷಿ ಪಟ್ಟಿದ್ದಾರೆ. ಒಟ್ಟಿನಲ್ಲಿ ವಿದ್ಯಾಗಣಪತಿ ಶಾಲೆ ಅವಳಿ ಮಕ್ಕಳ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿರೋದಂತು ಸುಳ್ಳಲ್ಲ.

Ads on article

Advertise in articles 1

advertising articles 2

Advertise under the article