ಸೆ*ಕ್ಸ್, ಹಣಕ್ಕಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದ ವೈಫ್ ಸ್ವ್ಯಾಪಿಂಗ್ ನ ಭಾರೀ ಜಾಲ ಪತ್ತೆ: 7 ಮಂದಿ ಬಂಧನ
Tuesday, January 11, 2022
ತಿರುವನಂತಪುರಂ: ಸೆ*ಕ್ಸ್ ಹಾಗೂ ಹಣಕ್ಕಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದ ವೈಫ್ ಸ್ವ್ಯಾಪಿಂಗ್ ಜಾಲವೊಂದು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈ ತಂಡದಲ್ಲಿದ್ದ ಏಳು ಮಂದಿಯನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ.
ಈ ಜಾಲದ ಬಗ್ಗೆ ಚಂಗನಾಸೆರಿಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹಣ ಹಾಗೂ ಸೆ*ಕ್ಸ್ ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಲೆಂದೇ ಈ ನೀಚರು ಟೆಲಿಗ್ರಾಂ, ಮೆಸೆಂಜರ್ ಗಳಲ್ಲಿ ಗ್ರೂಪ್ ಗಳನ್ನು ಮಾಡಿಕೊಂಡಿದ್ದರು. ಕೇರಳದ ಮೂರು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಈ ಗ್ರೂಪ್ ಗಳಲ್ಲಿ ಸದಸ್ಯರಿದ್ದಾರೆ.
ಈ ಜಾಲವು ಎಫ್ ಬಿ, ಟೆಲಿಗ್ರಾಂ ಗ್ರೂಪ್ ಗಳಲ್ಲಿ ‘ಮೀಟ್ ಅಪ್ ಕೇರಳ’, ‘ಕಪಲ್ ಮೀಟ್ ಕೇರಳ’, ‘ಕುಕೋಲ್ಡ್ ಕೇರಳ’, ‘ರಿಯಲ್ ಮೀಟಿಂಗ್’ ಇತ್ಯಾದಿ ಹೆಸರುಗಳಲ್ಲಿ ಸಕ್ರಿಯವಾಗಿದೆ. ಈ ಗ್ರೂಪ್ ಗಳಲ್ಲಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆಯು ವಿವಾಹಿತೆಯಾಗಿದ್ದು 'Couple Sharing' ಗುಂಪಿನ ಭಾಗವಾಗಿದ್ದ ತನ್ನ ಪತಿಯ ವಿರುದ್ಧ ದೂರು ನೀಡಿದ್ದಾರೆ. "ತನ್ನ ಪತಿ ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ. ಬೇರೆ ಪುರುಷರಿಗೆ ಲೈಂಗಿಕತೆಯನ್ನು ನಿರಾಕರಿಸಿದರೆ ಅಥವಾ ಯಾರೊಂದಿಗಾದರೂ ವಿಚಾರವನ್ನು ತಿಳಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಆಕೆಯ ಪತಿ ಮಹಿಳೆಗೆ ಬೆದರಿಕೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. ಪತಿಯಿಂದಾಗಿ ತಾನು ಅಸ್ವಾಭಾವಿಕ ಲೈಂಗಿಕತೆಗೆ ಒಳಪಟ್ಟಿರುವುದಾಗಿ ಮಹಿಳೆ ತನ್ನ ಅಳಲನ್ನು ಬಿಚ್ಚಿಟ್ಟಿದ್ದಾರೆ. ಆಕೆಯ ಪತಿ ಹಾಗೂ ಆತನ ಗೆಳೆಯರ ಬಂಧನದ ಬಳಿಕ ಪೋಲೀಸರು 'ಕಪಲ್ ಹಂಚಿಕೆ'ಯ ದೊಡ್ಡ ಜಾಲವನ್ನೇ ಬಯಲು ಮಾಡಿದ್ದಾರೆ.
ಮಹಿಳೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಕೊಟ್ಟಾಯಂ, ಅಲಪ್ಪುಝ ಮತ್ತು ಎರ್ನಾಕುಲಂ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಇನ್ನೂ ಹಲವಾರು ಮಂದಿ ಈ ಗ್ರೂಪ್ ಗಳಲ್ಲಿ ಸಕ್ರಿಯರಾಗಿದ್ದಾರೆಂಬ ಶಂಕೆ ಇದ್ದು, ಒಂದೆರಡು ದಿನಗಳಲ್ಲಿ ಹೆಚ್ಚಿನವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.