ಅನಿವಾಸಿ ಭಾರತೀಯ, ಉದ್ಯಮಿ B R Shettyಗೆ ಬಿಗ್ ಶಾಕ್!  968 ಕೋಟಿ ರೂ. ಪಾವತಿಗೆ ಲಂಡನ್‌ ಕೋರ್ಟ್‌ ಆದೇಶ

ಅನಿವಾಸಿ ಭಾರತೀಯ, ಉದ್ಯಮಿ B R Shettyಗೆ ಬಿಗ್ ಶಾಕ್! 968 ಕೋಟಿ ರೂ. ಪಾವತಿಗೆ ಲಂಡನ್‌ ಕೋರ್ಟ್‌ ಆದೇಶ


ಭಾರತೀಯ ಮೂಲದ,ಉದ್ಯಮಿ ಬಿ.ಆರ್. ಶೆಟ್ಟಿಗೆ 131 ದಶಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ9,68 ಕೋಟಿ ರೂ ) ಪಾವತಿಸುವಂತೆ ಲಂಡನ್ ಕೋರ್ಟ್ ಆದೇಶಿಸಿದೆ.

ಬಿ.ಆರ್. ಶೆಟ್ಟಿ ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ವ್ಯವಹಾರ ಒಪ್ಪಂದದ ಪ್ರಕಾರ ಬಾರ್ಕ್ಲೇಸ್ ಕಂಪನಿಗೆ ಹಣ ಪಾವತಿಸುವಲ್ಲಿ ವಿಫಲವಾಗಿದ್ದರು. ಹಾಗಾಗಿ ಬಿ.ಆರ್. ಶೆಟ್ಟಿ ಅವರಿಂದ ಹಣ ಕೊಡಿಸಬೇಕು ಎಂದು ಬಾರ್ಕ್ಲೇಸ್ ಕಂಪನಿ ಲಂಡನ್ ಕೋರ್ಟ್ ಮೊರೆ ಹೋಗಿತ್ತು. ಕಂಪೆನಿಯ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಇದೀಗ 131 ದಶಲಕ್ಷ ಡಾಲರ್ ಪಾವತಿಸಲು ಸೂಚಿಸಿದೆ.

ಈ ಹಿಂದೆ ದುಬೈ ಕೋರ್ಟ್ ಬಾರ್ಕ್ಲೇಸ್ ಕಂಪನಿ ಪರವಾಗಿ ಆದೇಶ ನೀಡಿತ್ತು. ​ ದುಬೈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಿ.ಆರ್ ಶೆಟ್ಟಿ ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.ಕಳೆದ ಡಿಸೆಂಬರ್‌ನಲ್ಲಿ ಬ್ರಿಟನ್‌ ನ್ಯಾಯಾಲಯ ವಿಚಾರಣೆಯ ಸಂದರ್ಭದಲ್ಲಿ ಬಿ.ಆರ್.ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ತೀರ್ಪನ್ನು ಮುಂದೂಡಬೇಕು ಎಂದು ಕೋರಿದ್ದರು. ಈ ಕಾರಣದಿಂದ‌ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2022ರ ಜನವರಿ 10ಕ್ಕೆ ಮುಂದೂಡಿತ್ತು.ನಿನ್ನೆ ವಿಚಾರಣೆ ನಡೆಸಿದ ಕೋರ್ಟ್ ಬಿ.ಆರ್ ಶೆಟ್ಟಿ ಬ್ಯಾಂಕ್ ಬಾರ್ಕ್ಲೇಸ್‌ಗೆ 131 ಮಿಲಿಯನ್ ರೂ ಪಾವತಿಸಲು ಆದೇಶಿಸಿದೆ.

ಇದರ ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳ ಬ್ಯಾಂಕ್‌ ಪ್ರತಿನಿಧಿಗಳು, ಲಂಡನ್‌ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ನಿಂದ ಅನುಮತಿ ಪಡೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article