ಸಚಿವ ಎಸ್.ಟಿ ಸೋಮಶೇಖರ್ ಮಗನಿಗೆ Blackmail; ಖ್ಯಾತ ಜ್ಯೋತಿಷಿ ಮುಲ್ಕಿ ಕಿಲ್ಪಾಡಿ ಚಂದ್ರಶೇಖರ ಗುರೂಜಿ ಪುತ್ರನಿಂದಲೇ ಸ್ಕೆಚ್, ಬಂಧನ
Sunday, January 9, 2022
ಬೆಂಗಳೂರು: ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಪುತ್ರ ನಿಶಾಂತ್ ಗೆ ಮೆಸೇಜ್ ಮಾಡಿ, ಅಶ್ಲೀಲ ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿ ಎಫ್ ಐ ಆರ್ ದಾಖಲಾಗಿದ್ದು ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ದಕ್ಷಿಣ ಕನ್ನಡ ಮೂಲದ ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಪುತ್ರ ರಾಹುಲ್ ಭಟ್ ನನ್ನು ಬಂಧಿಸಿದ್ದಾರೆ.
ನಿಶಾಂತ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಭಟ್ ನಿಂದಲೇ ಬೆದರಿಕೆ ಕರೆ ಬಂದಿರೋದು ಖಚಿತಗೊಂಡಿದೆ. UK ಸಿಮ್‌ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದು, ಸಿಮ್ ಕಾರ್ಡ್ ಸೀಝ್ ಮಾಡಲಾಗಿದೆ. ಈ ದುಷ್ಕೃತ್ಯದ ಹಿಂದೆ ವಿಜಯಪುರದ MLA ಯೊರ್ವರ ಪುತ್ರಿಯ ಕೈವಾಡವಿರುವ ಅನುಮಾನ ವ್ಯಕ್ತವಾಗಿದ್ದು ಸದ್ಯ ರಾಹುಲ್ ಭಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ಪೊಲೀಸ್ರು, ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ಇನ್ನು ನಿಶಾಂತ್ ದೂರಿನಲ್ಲಿ ಹೇಳಿರೋ ಅಂಶಗಳನ್ನ ನೋಡೋದಾದ್ರೆ "ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಅಶ್ಲೀಲ ನಕಲಿ ದೃಶ್ಯಾವಳಿ ಸೃಷ್ಟಿ ಮಾಡಲಾಗಿದೆ. ಕೆಲ ಫೋಟೊಗಳನ್ನೂ ಸಹ ಸೃಷ್ಟಿಸಿ Blackmail ಮಾಡುತ್ತಿದ್ದಾರೆ. ವೀಡಿಯೊ ಮತ್ತು ಫೋಟೋಸ್ ನ್ನು ನನ್ನ ತಂದೆಯ PA ಶೀನಿವಾಸ್ ಗೌಡ ಹಾಗೂ ಭಾನುಪ್ರಕಾಶ್ ಮೊಬೈಲ್ ಗೂ ಕಳಿಸಿದ್ದಾರೆ. ಅಲ್ಲದೆ, ವಾಟ್ಸ್ ಆಪ್ ಮೂಲಕ ಪದೇ ಪದೆ ಮೆಸೇಜ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ, ತಾವು ಕೇಳಿದಷ್ಟು ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ರು. ಹಣ ನೀಡದಿದ್ದಲ್ಲಿ ವೀಡಿಯೋ ಬಹಿರಂಗ ಪಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.