ಮಂಗಳೂರು: ಠಾಣೆಯಲ್ಲಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟನ್ನೇ ನಕಲಿ ಮಾಡಿರುವ ಭೂಪ-cctv ವೀಡಿಯೋ ಬಿಡುಗಡೆ ಮಾಡಿದ ಪೊಲೀಸರು
Saturday, January 8, 2022
ಮಂಗಳೂರು: ಪ್ರಕರಣವೊಂದರ ನಿಮಿತ್ತ ಇತ್ಯರ್ಥವಾಗದೆ ಠಾಣೆಯಲ್ಲಿ ಉಳಿದಿರುವ ವಾಹನವೊಂದರ ನಂಬರ್ ಪ್ಲೇಟ್ ಅನ್ನೇ ನಕಲಿ ಮಾಡಿ ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿ ತಿರುಗಾಡುತ್ತಿರುವ ವಂಚಕನಿಗೆ ಮಂಗಳೂರು ಉತ್ತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣವೊಂದರ ನಿಮಿತ್ತ Dio Two Wheeler ವಾಹನವೊಂದು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಬಾಕಿಯಾಗಿದೆ. ಆದರೆ ಇದೇ ಡಿಯೋ ವಾಹನದ ನಂಬರನ್ನು(KA 19 HD 6497) ಖದೀಮನೋರ್ವನು ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ವಾಹನವು ಮಂಗಳೂರು ನಗರದಾದ್ಯಂತ ಸುತ್ತಾಡುತ್ತಿದೆ.
ಅಲ್ಲದೆ ಈ ಖದೀಮನು ಮಂಗಳೂರು ಸಿಟಿ ಸೆಂಟರ್ ಮಾಲ್ ನ ಪಾರ್ಕಿಂಗ್ ಏರಿಯಾದಲ್ಲಿರುವ 2 ಹೆಲ್ಮೆಟ್ ಅನ್ನು ಕಳವುಗೈದಿರುವ ಬಗ್ಗೆಯೂ ಸಿಸಿ ಕ್ಯಾಮರಾ ದಾಖಲಾಗಿದೆ. ಇದೀಗ ದ್ವಿಚಕ್ರ ವಾಹನ ಸಹಿತ ಈತನ ವೀಡಿಯೋವನ್ನು ಬಿಡುಗಡೆ ಮಾಡಿರುವ ಪೊಲೀಸರು ಸುಳಿವು ಸಿಕ್ಕರೆ ತಕ್ಷಣ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಂಬರ್ 0824-2220516, 9480805338 ನೆ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.