ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ಜಿಲ್ಲೆಯ ಆರು ಶಾಲೆ,ಕಾಲೇಜು ಬಂದ್(corona positive)
Wednesday, January 19, 2022
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚತೊಡಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಾಲೆ, ಕಾಲೇಜುಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾದರೆ ಆಯಾ ಶಿಕ್ಷಣ ಸಂಸ್ಥೆಗಳನ್ನು ವಾರದ ಮಟ್ಟಿಗೆ ರಜೆ ನೀಡಲು ಸೂಚನೆ ನೀಡಿದ್ದಾರೆ. ಅದರಂತೆ, ದ.ಕ ಜಿಲ್ಲೆಯ ಐದು ಶಾಲೆಗಳು ಮತ್ತು ಒಂದು ಕಾಲೇಜನ್ನು ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ಮಂಗಳೂರು ಬೆಂಗ್ರೆ ಕಸಬಾದ ಸರಕಾರಿ ಪ್ರೌಢಶಾಲೆ, ಡೊಂಗರಕೇರಿ ಕೆನರಾ ಸಿಎಸ್ ಬಿಸಿ, ಬಜ್ಜೆಯ ಅನ್ಸಾರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಮೂಲ್ಕಿಯ ವ್ಯಾಸ ಮಹರ್ಷಿ ಇಂಗ್ಲಿಷ್ ಮೀಡಿಯಂ ಸರಕಾರಿ ಪ್ರೌಢಶಾಲೆ ಹೈಸ್ಕೂಲ್, ಮುಂಚೂರು ಮತ್ತು ಎಡಪದವು ವಿವೇಕಾನಂದ ಪಿಯು ಕಾಲೇಜನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಐದು ಮಂದಿಗಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಂಡುಬಂದಲ್ಲಿ ಅಂಥ ಸಂಸ್ಥೆಯನ್ನುಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಒಂದು ವಾರ ಕಾಲ ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.