ಮಂಗಳೂರು:ಆಸ್ಪತ್ರೆಯ ಕರ್ತವ್ಯದಲ್ಲಿದ ಸಮಯದಲ್ಲಿ ವೀಡಿಯೋ ಗೇಮ್ ಆಡಿದ್ದ ವೀಡಿಯೋ ವೈರಲ್; ಜಿಲ್ಲಾ ವೆನ್ಲಾಕ್ ಸಿಬ್ಬಂದಿ ಅಮಾನತು!(doctor suspend)

ಮಂಗಳೂರು:ಆಸ್ಪತ್ರೆಯ ಕರ್ತವ್ಯದಲ್ಲಿದ ಸಮಯದಲ್ಲಿ ವೀಡಿಯೋ ಗೇಮ್ ಆಡಿದ್ದ ವೀಡಿಯೋ ವೈರಲ್; ಜಿಲ್ಲಾ ವೆನ್ಲಾಕ್ ಸಿಬ್ಬಂದಿ ಅಮಾನತು!(doctor suspend)

ಮಂಗಳೂರು:  ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಸಂದರ್ಭ ವೀಡಿಯೋ ಗೇಮ್ ಆಡುತ್ತಿದ್ದ ಆರೋಪದ ಮೇಲೆ ಸಿಬ್ಬಂದಿಯೋರ್ವನನ್ನು ಅಮಾನತು ಮಾಡಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಆದೇಶಿಸಿದ್ದಾರೆ.

ಈತ KMC ಹಾಸ್ಪಿಟಲ್‌ ನ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾಶುವಲ್ಟಿಯಲ್ಲಿ ಸಿಬ್ಬಂದಿಯಾಗಿದ್ದ. ಈತ ಜನವರಿ 23ರಂದು ರಾತ್ರಿ ಕರ್ತವ್ಯದಲ್ಲಿದ್ದ ಸಂದರ್ಭ ವೀಡಿಯೋ ಗೇಮ್ ಆಡುತ್ತಿದ್ದ ಎನ್ನಲಾಗಿದ್ದು, ಇದರ ವೀಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ರು.

ಈ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷರು ತನಿಖೆ ನಡೆಸಿದ್ದರು. ಆಗ ಕೆಎಂಸಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಯಿಂದ ಈ ಕೃತ್ಯ ನಡೆದಿರೋದು ಸಾಬೀತಾಗಿದೆ. ಆದ್ದರಿಂದ ಆ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ. ಅದಲ್ಲದೆ ಮುಂದೆ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲು ವೈದ್ಯಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article