ನೈಟ್ ಕರ್ಫ್ಯೂ ರದ್ದು, ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ(night curfew cancel)
Saturday, January 29, 2022
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಕಾರಣದಿಂದ ಮುಚ್ಚಿದ ಶಾಲೆಗಳನ್ನು ತೆರೆಯಲು ಎಂದು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ಜನವರಿ 31ರ ಬಳಿಕ ನೈಟ್ ಕರ್ಫ್ಯೂವನ್ನು ತೆರವು ಮಾಡಲಾಗಿದೆ.ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರು, ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆದಿದ್ದು, ಅದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ನಿಯಮಗಳು
ಜನವರಿ 31ರಿಂದ ರಾಜ್ಯಾದ್ಯಂತ ಇರುವ ನೈಟ್ ಕರ್ಫ್ಯೂ ರದ್ದು
ಬೆಂಗಳೂರಿನಲ್ಲಿ ಸೋಮವಾರದಿಂದ ಶಾಲಾ ತರಗತಿಗಳು ಪುನರಾರಂಭ
ಜಾತ್ರೆ,ಉರೂಸ್, ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ ಮುಂದುವರಿಕೆ
ದೇವಸ್ಥಾನ- ಚರ್ಚ್- ಮಸೀದಿಗಳಲ್ಲಿ ಸೇವೆ ಪುನರಾರಂಭ
ಕಚೇರಿಗಳಲ್ಲಿ ಶೇ100 ರಷ್ಟು ಉದ್ಯೋಗಿಗಳಿಗೆ ಅವಕಾಶ
ಚಿತ್ರ ಮಂದಿರ, ಈಜುಕೊಳ, ಜಿಮ್ ಗಳಲ್ಲಿ ಶೇ.50 ಮಂದಿಗೆ ಅವಕಾಶ
ಮಹಾರಾಷ್ಟ್ರ, ಗೋವಾ ಮತ್ತು ಕೇರಳದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ತೆರೆಯಲು ಅನುಮತಿ
ಒಳಾಂಗಣ ಮದುವೆಗೆ 200 ಜನ, ಹೊರಾಂಗಣ ಮದುವೆಗಳಿಗೆ 300 ಜನರಿಗೆ ಅವಕಾಶ