ಗಣರಾಜ್ಯೋತ್ಸವದ ದಿನದಂದೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕೇರಳ ಬಂದರು ಸಚಿವ…!! ರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಅಹ್ಮದ್ ದೇವರ್ ಕೋವಿಲ್...!!
Wednesday, January 26, 2022
ರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ಕಾಸರಗೋಡಿನ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ನಡೆದಿದೆ.
ಇಂದು ಮುನ್ಸಿಪಲ್ ಸ್ಟೇಡಿಯಂನಲ್ಲಿ ಕಾಸರಗೋಡು ಜಿಲ್ಲಾಡಳಿತದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣ ನೆರವೇರಿಸಿದ ಕೇರಳ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅವರು ರಾಷ್ಟ್ರ ಧ್ವಜವನ್ನು ಹಾರಿಸಿದ ಸಂಧರ್ಭ ರಾಷ್ಟ್ರ ಧ್ವಜ ತಲೆ ಕೆಳಗಾಗಿ ಹಾರಿದೆ.
ರಾಷ್ಟ್ರ ಧ್ವಜ ಏರಿಸಿ ರಾಷ್ಟ್ರಗೀತೆ ಮುಗಿಯುವವರೆಗೂ ಧ್ವಜ ತಲೆಕೆಳಗಾಗಿಯೇ ಇದ್ದರೂ ಕೂಡ ಗಮನಹರಿಸಿರಲಿಲ್ಲ. ಈ ನಡುವೆ ವ್ಯಕ್ತಿಯೋರ್ವರು ವಿಷಯ ಗಮನಕ್ಕೆ ತಂದ ಬಳಿಕ ಧ್ವಜ ಕೆಳಗಿಳಿಸಿ ಮತ್ತೆ ಹಾರಿಸಲಾಯಿತು.
ರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ಘಟನೆ ಕುರಿತು ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ತನಿಖೆಗೆ ಸೂಚಿಸಿದ್ದಾರೆ