ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ(Gold smuggling)ಮಾಡ್ತಿದ್ದ ಮೂವರು ಮಹಿಳೆಯರ ಬಂಧನ(arrest)
Wednesday, January 12, 2022
ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳ ಉಡುಪು ಮತ್ತು ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.ಈ ಸಂಬಂಧ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
RGIS ಏರ್ಪೋರ್ಟ್ ನಲ್ಲಿ ಮೂವರು ಮಹಿಳಾ ಪ್ರಯಾಣಿಕರು 72.80 ಲಕ್ಷ ಮೌಲ್ಯದ 1.48 ಕೆಜಿ ತೂಕದ ಚಿನ್ನವನ್ನು ತಮ್ಮ ಒಳ ಉಡುಪು, ಗುಪ್ತಾಂಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದರು. ತಪಾಸಣೆ ವೇಳೆ ಮಹಿಳೆಯರು ಸಿಕ್ಕಿಬಿದ್ದಿದ್ದು, ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು ಇವರ ವಿರುದ್ಧ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಿಸಿಕೊಂಡು ಮಹಿಳೆಯರ ಬಳಿ ಇದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು "ಮಹಿಳೆಯರು ವಿಮಾನದಲ್ಲಿ ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಅವರಲ್ಲಿ ಇಬ್ಬರು ಚಿನ್ನವನ್ನು Paste ರೂಪದಲ್ಲಿ ಸಾಗಿಸುತ್ತಿದ್ದು ಅದನ್ನು ಒಳ ಉಡುಪುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.ಇನ್ನೊಬ್ಬ ಮಹಿಳೆ ಅದನ್ನು ಗುಪ್ತಾಂಗದೂಳಗೆ ಇಟ್ಟುಕೊಂಡಿದ್ದು ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.