ಮತ್ತೆ ಲಾಕ್‌ಡೌನ್ ಮಾಡೋದಾದ್ರೆ ಅಂದ್ರೆ ಲಸಿಕೆ ಏಕೆ ಬೇಕಿತ್ತು: ಸಂಸದ ಪ್ರತಾಪ್ ಸಿಂಹ ಪ್ರಶ್ನೆ(lockdown)
Thursday, January 20, 2022
ಮೈಸೂರು: ಮತ್ತೆ ಲಾಕ್‌ಡೌನ್ ಮಾಡೋ ಹಾಗಿದ್ರೆ ವ್ಯಾಕ್ಸಿನೇಷನ್ ಯಾಕೆ ಬೇಕಿತ್ತು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆ ನೀಡಿಲಾಗಿದೆ. ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಿದ್ದು ಎಲ್ಲಾ ಆಸ್ಪತ್ರೆ ಕಡೆಯೂ ಆಕ್ಸಿಜನ್ ಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ಈಗ ಮತ್ತೆ ಲಾಕ್‌ಡೌನ್ ಮಾಡ್ತೀವಿ ಅಂದ್ರೆ ಲಸಿಕೆ ಏಕೆ ಬೇಕಿತ್ತು ಎಂದು ಕಿಡಿಕಾರಿದರು.
ಲಾಕ್‌ಡೌನ್, ಕರ್ಪ್ಯೂನಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಜನರ ಜೀವ ಕಾಪಾಡುವುದರ ಜೊತೆಗೆ ಜೀವನವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಕಳೆದೆರಡು ವರ್ಷಗಳಿಂದ ಜನರ ವ್ಯಾಪಾರ, ವಹಿವಾಟಿಗೆ ಬಹಳ ದೊಡ್ಡ ಹೊಡೆತ ಬಿದ್ದಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಜನರ ಬದುಕನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವೀಕೆಂಡ್ ಕರ್ಪ್ಯೂ, ನಿಷೇಧಾಜ್ಞೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.