Mangalore:ದಾಖಲೆ ರಹಿತ 1.48 ಕೋಟಿ ನಗದು ಸಾಗಾಟ, ಬಂಧನ,ಜಾಮೀನು
Wednesday, January 26, 2022
ಮಂಗಳೂರು: ಅಧಿಕೃತ ದಾಖಲೆ ಇಲ್ಲದೆ ರೈಲಿನಲ್ಲಿ 1.48 ಕೋಟಿ ರೂ. ನಗದು ಮತ್ತು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ರಾಜಸ್ತಾನದ ಮಹೇಂದ್ರ ಸಿಂಗ್ ಎಂಬಾತನಿಗೆ ಮಂಗಳೂರಿನ JMFC 3ನೇ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಮಂಗಳೂರಿನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಹೇಂದ್ರ ಸಿಂಗ್, ಹಣ ಮತ್ತು ಚಿನ್ನಾಭರಣದೊಂದಿಗೆ ಪತ್ತೆಯಾಗಿದ್ದ. ಪೊಲೀಸರು ಆರೋಪಿ ಮತ್ತು ಪತ್ತೆಯಾದ ಸೊತ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಕರಣದ ತನಿಖೆಯನ್ನು ಐಟಿ ಇಲಾಖೆಗೆ ಒಪ್ಪಿಸಲು ನ್ಯಾಯಾಲಯ ಆದೇಶ ನೀಡಿ ಅರೋಪಿಗೆ ಶರತ್ತು ಬದ್ದ ಜಾಮೀನು ನೀಡಿದೆ.