Mangalore: ಪೂಜೆ ನೆಪದಲ್ಲಿ ಪುರೋಹಿತರನ್ನು ಮನೆಗೆ ಕರೆಸಿ ಹನಿಟ್ರ್ಯಾಪ್ ; 50 ಲಕ್ಷಕ್ಕೂ ಹೆಚ್ಚು ಹಣ ಪೀಕಿಸಿ blackmail ಮಾಡಿದ ಖತರ್ನಾಕ್ ದಂಪತಿ ಸೆರೆ !

Mangalore: ಪೂಜೆ ನೆಪದಲ್ಲಿ ಪುರೋಹಿತರನ್ನು ಮನೆಗೆ ಕರೆಸಿ ಹನಿಟ್ರ್ಯಾಪ್ ; 50 ಲಕ್ಷಕ್ಕೂ ಹೆಚ್ಚು ಹಣ ಪೀಕಿಸಿ blackmail ಮಾಡಿದ ಖತರ್ನಾಕ್ ದಂಪತಿ ಸೆರೆ !

ಮಂಗಳೂರು: ಹನಿಟ್ರ್ಯಾಪ್ ಬಲೆಗೆ ಕೆಡವಿ ಪುರೋಹಿತರೋರ್ವರಿಂದ ಬರೋಬ್ಬರಿ 49 ಲಕ್ಷ ರೂ. ನಗದು ದೋಚಿದ ಖತರ್ನಾಕ್ ಜೋಡಿಯೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪದವಿನಂಗಡಿ ನಿವಾಸಿಗಳಾದ ಕೊಡಗು ಮೂಲದ ಭವ್ಯಾ(30), ಹಾಸನ ಮೂಲದ ಕುಮಾರ್ ಅಲಿಯಾಸ್ ರಾಜು ಬಂಧಿತರು.

ಬಂಧಿತ ಜೋಡಿ ತಾವಿಬ್ಬರೂ ದಂಪತಿಯೆಂದು ಜ್ಯೋತಿಷ್ಯಿಯೂ ಆದ ಪುರೋಹಿತರಲ್ಲಿ ಪರಿಚಯ ಮಾಡಿಕೊಂಡಿದ್ದರು.ತಮ್ಮಿಬ್ಬರ ನಡುವೆ ಹೊಂದಾಣಿಕೆಯಿಲ್ಲ. ಆದ್ದರಿಂದ ತಮ್ಮ ಮನೆಗೆ ಬಂದು ಪೂಜೆ ಮಾಡಬೇಕೆಂದು ಕರೆಸಿಕೊಂಡಿದ್ದಾರೆ. ಆ ಬಳಿಕ ಆರೋಪಿ ರಾಜು ಜ್ಯೋತಿಷಿ ಮತ್ತು ಭವ್ಯಾ ಜೊತೆಗಿದ್ದ ವೀಡಿಯೋ, ಫೋಟೋ ಹಾಗೂ ಆಡಿಯೋಗಳನ್ನು ಇರಿಸಿಕೊಂಡು ಹಣಕ್ಕೆ ಬ್ಲಾಕ್ ಮೇಲ್ ಮಾಡಲು‌ ಆರಂಭಿಸಿದ್ದಾರೆ. ಈ ಮೂಲಕ ತಾವು ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದಲ್ಲಿ ವೀಡಿಯೋ, ಫೋಟೋಗಳು ಹಾಗೂ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿದ್ದಾರೆ‌. ಅಲ್ಲದೆ ಮೀಡಿಯಾ, ಪೊಲೀಸರು, ಮಹಿಳಾ ಸಂಘಟನೆಯ ಹೆಸರು ಹೇಳಿಕೊಂಡು 15 ಲಕ್ಷ ರೂ. ನಗದು ಪಡೆದಿದ್ದಾರೆ. ನಂತರ ಅದೇ ರೀತಿ 34 ಲಕ್ಷ ರೂ. ಹಣವನ್ನು ಬೇರೆ ಬೇರೆ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದಾರೆ.

ಪುರೋಹಿತ ತನ್ನ ಸಂಬಂಧಿಕರು,ಫೈನಾನ್ಸ್ ಮತ್ತು ಸ್ನೇಹಿತರಲ್ಲಿ ಸಾಲ ಪಡೆದು ಈ ಹಣವನ್ನು ಆರೋಪಿಗಳಿಗೆ ನೀಡಿದ್ದರು. ಆದರೂ ಪದೇ ಪದೇ ಹಣಕ್ಕೆ ಬೇಡಿಕೆ ಕೇಳಿ ಬರುತ್ತಲೇ ಇದ್ದರಿಂದ ಬೇಸತ್ತ ಜ್ಯೋತಿಷಿ ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ‌. ಆತ ನೀಡಿರುವ ದೂರಿನ್ನಾಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ಮಾಡಲು‌ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article