Mangalore: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಬಸ್ ಚಾಲಕ ಅರೆಸ್ಟ್ (Harassment)
Sunday, January 30, 2022
ಮಂಗಳೂರು: 13 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಮಂಗಳೂರು ನಗರದ ಬಸ್ ಚಾಲಕನೋರ್ವನನ್ನು ಪೊಕ್ಸೊ ಕಾಯ್ದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ಸದ್ಯ ನಗರದ ಕುಂಜತ್ತಬೈಲ್ ನಿವಾಸಿ, ದಯಾನಂದ(32) ಬಂಧಿತ ಆರೋಪಿ.
ಆರೋಪಿ ದಯಾನಂದ ನಗರದಲ್ಲಿ ಬಸ್ ಚಾಲಕನಾಗಿ ವೃತ್ತಿ ಮಾಡಿಕೊಂಡಿದ್ದ. ಈತ 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಈ ಬಗ್ಗೆ ಬಾಲಕಿಯ ಪೋಷಕರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.