Bangalore:ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ತಲೆ ಎತ್ತಿದ ಮುಸ್ಲಿಂ ಪ್ರಾರ್ಥನಾ ಮಂದಿರ: ಕಾರ್ಮಿಕರ ರೆಸ್ಟ್ ರೂಂ ಪ್ರಾರ್ಥನಾ ಮಂದಿರವಾಗಿ ಮಾರ್ಪಾಡು!
Monday, January 31, 2022
ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದೊಳಗೊಂದು ಮಸೀದಿ ಸದ್ದಿಲ್ಲದೆ ತಲೆ ಎತ್ತಿದೆ. ಪ್ಲಾಟ್ ಫಾರಂ 6ರ ಕಾರ್ಮಿಕರ ರೆಸ್ಟ್ ರೂಮ್ ಮುಸ್ಲಿಮರ ಪ್ರಾರ್ಥನಾ ಮಂದಿರವಾಗಿ ಮಾರ್ಪಾಡಾಗಿದೆ.
ಈ ಬಗ್ಗೆ ಕೇರಳದ ಒಬ್ಬ ವ್ಯಕ್ತಿ ಬೆಂಗಳೂರಿನ ಪ್ಲಾಟ್ ಫಾರಂ 6ರ ಮಸೀದಿ ಬಳಿ ಮಾಡಿರುವ ವಾಯ್ಸ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರೈಲ್ವೆ ಸ್ಟೇಷನ್ ಮಸೀದಿಯಾಗಿ ಕನ್ವರ್ಟ್ ಮಾಡಿದ್ದಕ್ಕೆ ಶ್ರೀರಾಮ ಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.ಇದು ಅಧಿಕಾರಿಗಳ ನಿಷ್ಕ್ರಿಯತೆಯನ್ನು ಎತ್ತಿತೋರಿಸುತ್ತೆ. ಕೂಡಲೇ ರೈಲ್ವೇ ಅಧಿಕಾರಿಗಳು ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಬೇಕು.ಇಲ್ಲದಿದ್ದರೆ ರಾಮಸೇನೆ ತೆರವು ಕಾರ್ಯಾಚರಣೆ ನಡೆಸಲಿದೆ.
ಕಳೆದ 35 ವರ್ಷಗಳಿಂದ ಈ ಕಾರ್ಯಾಚರಿಸುತ್ತಿರುವ ಈ ಮಸೀದಿ ಕುರಿತು ರೈಲ್ವೆ ನಿಲ್ದಾಣದ ಮ್ಯಾನೇಜ್‌ಮೆಂಟ್ ಏನ್ ಹೇಳುತ್ತೆ!? ಇದು ತಾತ್ಕಾಲಿಕ ವ್ಯವಸ್ಥೆಯೇ? ಈ ರೀತಿ ಅವಕಾಶ ಕೊಡಲು ಕಾನೂನಿನಡಿ ಸಾಧ್ಯತೆಗಳಿವೆಯಾ!? ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.