ಹೆತ್ತವ್ವೆಯ ಮೇಲೆ ಎರಗಿದ ಕಾಮುಕ ಪುತ್ರ: ಪುತ್ತೂರಿನಲ್ಲೊಂದು ಅಮಾನವೀಯ ಘಟನೆ(Rape)
Friday, January 14, 2022
ಮಂಗಳೂರು: ಕಾಮುಕ ಪುತ್ರನೋರ್ವನು ಹೆತ್ತವ್ವೆಯ ಮೇಲೆಯೇ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯವೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ.ಜಯರಾಮ್ ರೈ(35 ವರ್ಷ) ಬಂಧಿತ ಆರೋಪಿ.
ತಡ ರಾತ್ರಿ ಹಾಗೂ ಮರುದಿನ ಬೆಳಗ್ಗೆ ಎರಡು ಬಾರಿ ಈ ಕಾಮುಕ ಪುತ್ರ ತನ್ನ ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಣಿಯಂತೆ ಎರಗಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಸಂತ್ರಸ್ತ ಮಹಿಳೆ(58 ವರ್ಷ) ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂತರ ಸಂತ್ರಸ್ತ ಮಹಿಳೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್) ಮತ್ತು 506 ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದ್ದು ಸದ್ಯ ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾಯಿ ಹಾಗೂ ಪುತ್ರ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು ದುಷ್ಕೃತ್ಯ ನಡೆದ ರಾತ್ರಿ ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. ಆರೋಪಿ ನಸುಕಿನ ಜಾವ 3 ಗಂಟೆಗೆ ತಾಯಿ ಮಲಗಿದ್ದ ಕೋಣೆಗೆ ತೆರಳಿ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭ ಆಕೆ ಕಿರುಚಿ ಪ್ರತಿಭಟನೆ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆರೋಪಿ ತಾಯಿಯ ಬಾಯಿಗೆ ಬಟ್ಟೆ ತುರುಕಿ, ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರದ ಬಳಿಕ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಜ.13ರಂದು ಬೆಳಗ್ಗೆ ಮತ್ತೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭ ಅಲ್ಲಿಗೆ ಬಂದ ಪುತ್ರ ಬಲವಂತದಿಂದ ಆಕೆಯನ್ನು ಮನೆಯ ಹಾಲ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ. ಆರೋಪಿ ಜಯರಾಮ್ ರೈಗೆ ಮದುವೆಯಾಗಿದ್ದು, ಸೀಮಂತ ಮುಗಿಸಿರುವ ಪತ್ನಿ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.