Udupi:ಕೃಷ್ಣನೂರಿನಲ್ಲಿ ಮೇಳೈಸಿದ ಮಕರ ಸಂಕ್ರಾಂತಿ ಸಂಭ್ರಮ-ಮೂರು ತೇರು ಉತ್ಸವದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಿ

Udupi:ಕೃಷ್ಣನೂರಿನಲ್ಲಿ ಮೇಳೈಸಿದ ಮಕರ ಸಂಕ್ರಾಂತಿ ಸಂಭ್ರಮ-ಮೂರು ತೇರು ಉತ್ಸವದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಿ

ಮಕರ ಸಂಕ್ರಾಂತಿಯಂದು ಉಡುಪಿಯ ಕೃಷ್ಣನನ್ನು ಮಧ್ವಾಚಾರ್ಯರು ಪ್ರತಿಷ್ಟಾಪಿಸಿದರೆಂದು ಪ್ರತೀತಿ. 
ಹೀಗಾಗಿ ಮಕರ ಸಂಕ್ರಾಂತಿ  ಸಂಭ್ರಮ ಕೃಷ್ಣನೂರಿನಲ್ಲಿ ಮೇಲೈಸುತ್ತೆ.. ರಾತ್ರಿ ವೇಳೆ ರಥಬೀದಿಯಲ್ಲಿ ನಡೆಯುವ ತೇರಿನ ಉತ್ಸವ, ಮಧ್ವ ಸರೋವರದ ಸಪ್ತೋತ್ಸವದ ನೋಡೋಕೆ ಎರಡು ಕಣ್ಣುಗಳು ಸಾಲದು.

ಏಕಕಾಲದಲ್ಲಿ ಮೂರು ತೇರುಗಳು ರಥಬೀದಿಯಲ್ಲಿ ಪ್ರದಕ್ಷಿಣೆ ಬರುವ ಈ ವಿಹಂಗಮ ನೋಟ ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮದ್ವರು ಕಡಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ನಡೆಯುತ್ತೆ. ಬ್ರಹ್ಮರಥದಲ್ಲಿ ಕೃಷ್ಣಮುಖ್ಯಪ್ರಾಣ ದೇವರನ್ನು ಇಟ್ಟು ಮೆರವಣಿಗೆ ಮಾಡಿದರೆ; ಮಹಾಪೂಜಾ ರಥ ಮತ್ತು ಗರುಡ ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಪ್ರದಕ್ಷಿಣೆ ನಡೆಯುತ್ತೆ. ಕೃಷ್ಣಮಠದ ವಾರ್ಷಿಕ ಜಾತ್ರೆಯನ್ನು ಸಪ್ತೋತ್ಸವ ಎನ್ನುತ್ತಾರೆ. ಮಕರಸಂಕ್ರಾಂತಿ ಮತ್ತು ಮರುದಿನ ನಡೆಯುವ ಚೂರ್ಣೋತ್ಸವದಿಂದ ಈ ಮಹೋತ್ಸವ ಸಂಪನ್ನಗೊಳ್ಳುತ್ತೆ.






ಇನ್ನೂ ಮಧ್ವಸರೋವರದಲ್ಲಿ ನಡೆಯುವ ತೆಪ್ಪೋತ್ಸವ ಈ ಆಚರಣೆಯ ಪ್ರಧಾನ ಆಕರ್ಷಣೆ. ಆಚಾರ್ಯ ಮದ್ವರ ಮಂದಿರದ ಸುತ್ತಲೂ ಪ್ರದಕ್ಷಿಣಾಕಾರವಾಗಿ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಲಾಗುತ್ತೆ. ಮೂರು ತೇರಿನ ಉತ್ಸವ ಕಾಣಲು ನಾಡಿನ ವಿವಿಧ ಭಾಗಗಳಿಂದ  ಜನರು ಬರುತ್ತಾರೆ. ಕೊಂಬು, ಕಹಳೆ ಚಂಡೆಯ ನಾದದ ನಡುವೆ ಅಷ್ಟ ಮಠಾಧೀಶರು ಉತ್ಸವದಲ್ಲಿ ಭಾಗವಹಿಸಿದ್ದರು. ವೈಭವದಿಂದ ನಡೆದ ಸುಡುಮದ್ದು ಪ್ರದರ್ಶನ ನೆರೆದಿದ್ದ ಜನರನ್ನು ಸಂಭ್ರಮದಿಂದ ಕುಣಿಯುವಂತೆ ಮಾಡಿತು. ಕೋವಿಡ್ ನಿಂದ ಬಳಲಿದ್ದ ಜನರಿಗೆ, ಈ ಮಹೋತ್ಸವ ನವೋಲ್ಲಾಸ ನೀಡಿತು. ಆದ್ರೆ ಹೆಚ್ಚು ಜನ ಸೇರಿಬೇಡಿ ಅಂದ್ರೂ ಭಕ್ತರು ಮಾತ್ರ ರಥಬೀದಿ ತುಂಬಿ ಕೋವಿಡ್ ರೂಲ್ಸ್ ಗಾಳಿಗೆ ತೂರಿದ್ದು ಮಾತ್ರ ಸುಳ್ಳಳ್ಳ.

ಉಡುಪಿ ಕೃಷ್ಣನಿಗೆ ನಿತ್ಯವೂ ರಥೋತ್ಸವ ನಡೆಯುತ್ತೆ. ಆದರೆ ಮಕರ ಸಂಕ್ರಾಂತಿಯ ಸಪ್ತೋತ್ಸವ ಸಾಂಪ್ರದಾಯಿಕ ಆಚರಣೆಗಳ ಮೂಲಕ ವಿಶ್ವಪ್ರಸಿದ್ದಿ ಪಡೆದಿದೆ.

Ads on article

Advertise in articles 1

advertising articles 2

Advertise under the article