Shabarimala: ಇಂದು ಶಬರಿಮಲೆ ಅಯ್ಯಪ್ಪ ಸನ್ನಿದಾನದಲ್ಲಿ ಮಕರ ಜ್ಯೋತಿದರ್ಶನ
Thursday, January 13, 2022
ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ಇಂದು ಜರುಗಲಿದೆ.
ಮಕರಜ್ಯೋತಿಯ ದರ್ಶನದ ಪೂರ್ವಭಾವಿಯಾಗಿ ನಿನ್ನೆ(ಗುರುವಾರ) ಪ್ರಸಾದ ಶುದ್ಧಿ ಕ್ರಿಯೆ, ಬಿಂಬಶುದ್ಧಿ ಕಾರ್ಯಕ್ರಮ ನಡೆಯಿತು. ತಮಿಳುನಾಡಿನಲ್ಲಿ ಒಮಿಕ್ರಾನ್ ನಿಯಂತ್ರಣ ರೂಲ್ಸ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಲೆಗೆ ತಮಿಳುನಾಡು ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಇಂದು ಮಧ್ಯಾಹ್ನ ನಂತರ ಪಂಪೆಯಿಂದ ಸನ್ನಿಧಾನಕ್ಕೆ ಹಾಗೂ ಹದಿನೆಂಟು ಮೆಟ್ಟಿಲೇರಲು ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಪಂದಳ ಅರಮನೆಯಿಂದ ಪವಿತ್ರ ದೇವರ ಅಭರಣ ಸನ್ನಿಧಾನಕ್ಕೆ ತಂದು, ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಿದ ನಂತರ ದೀಪಾರಾಧನೆಯೊಂದಿಗೆ ಮಕರಜ್ಯೋತಿ ದರ್ಶನವಾಗಲಿದೆ