(Gavi Gangadjareshwara)ಗವಿ ಗಂಗಾಧರೇಶ್ವರನಿಗೆ ಇಂದು ಸೂರ್ಯರಶ್ಮಿ:ರಶ್ಮಿ ಸ್ಪರ್ಶದ ಹಿನ್ನೆಲೆ ಏನು ಗೊತ್ತಾ!?

(Gavi Gangadjareshwara)ಗವಿ ಗಂಗಾಧರೇಶ್ವರನಿಗೆ ಇಂದು ಸೂರ್ಯರಶ್ಮಿ:ರಶ್ಮಿ ಸ್ಪರ್ಶದ ಹಿನ್ನೆಲೆ ಏನು ಗೊತ್ತಾ!?


ಗವಿ ಗಂಗಾಧರೇಶ್ವರ ದೇವಾಲಯ ಭಾರತದ ಪುರಾತನ ಇತಿಹಾಸವಿರುವ ಶಿವನ ಸಾನಿಧ್ಯ. ಈ ದೇವಾಲಯದ ವೈಶಿಷ್ಟ್ಯ ದಕ್ಷಿಣಾಭಿಮುಖವಾಗಿರುವ ಶಿವಲಿಂಗ. ಗವಿಪುರದಲ್ಲಿ ಗವಿಗಂಗಾಧರನ ದರ್ಶನ ಮಾಡುವುದು ಆತ್ಮಲಿಂಗೇಶ್ವರನ ದರ್ಶನ ಮಾಡಿದಷ್ಟೆ ಶ್ರೇಷ್ಠ. ಏಕಶಿಲೆಯಲ್ಲಿ ನಿರ್ಮಿಸಿದ ಈ ದೇವಾಲಯದಲ್ಲಿ ಭಾರದ್ವಾಜ, ಗೌತಮ ಮಹರ್ಷಿ ಇಬ್ಬರೂ ತಪಸ್ಸು ಮಾಡಿದ್ದಾರೆ ಎಂಬ ಪ್ರತೀತಿ ಇದೆ.
ಸಂಕ್ರಾಂತಿಯಂದು ಸೂರ್ಯ ದೇವನು ಉತ್ತರಾಯಣ ಪುಣ್ಯಕಾಲದಲ್ಲಿ ಗವಿಪುರದಲ್ಲಿರುವ ದಕ್ಷಿಣಾಭಿಮುಖ ದಲ್ಲಿರುವ ಶಿವನನ್ನ ಸೂರ್ಯರಶ್ಮಿ ಸ್ಪರ್ಶಿಸುತ್ತ ಸೂರ್ಯನೇ ಶಿವನನ್ನು ಪೂಜಿಸುತ್ತಾನೆ.
ನಂದೀಶ್ವರ, ವೇದ ಧರ್ಮದ ಪ್ರತೀಕ. ನಂದೀಶ್ವರನನ್ನು ಮೊದಲು ಪೂಜಿಸಿ ನಂತರ ಶಿವಲಿಂಗ ದರ್ಶನ ಮಾಡಲಾಗುತ್ತೆ. ಈ ದೇವಾಲಯದಲ್ಲಿ ಕಾಶಿಯನ್ನು ಸಂಪರ್ಕಿಸುವ ಸುರಂಗವಿತ್ತು ಅನ್ನೋ ಮಾತಿದೆ. ಭಾರದ್ವಾಜ ಮುನಿಗಳು ಇಲ್ಲಿಗೆ ಬರ್ತಾ ಇದ್ರೂ ಅನ್ನೋ ಪ್ರತೀತಿಯೂ ಇದ್ದು, ಇಲ್ಲಿನ ಶಿವಲಿಂಗವನ್ನು ದರ್ಶನ ಮಾಡಿದರೆ ಕೈಲಾಸದಲ್ಲಿರುವ ಪಾರ್ವತಿ ಪರಮೇಶ್ವರರ ದರ್ಶನ ಮಾಡಿದಷ್ಟೇ  ಶ್ರೇಷ್ಠ ಅನ್ನೋ ಮಾತಿದೆ. ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಚಂಡಿಕೇಶ್ವರ, ನಂದೀಶ್ವರ, ಪಾರ್ವತಿದೇವಿ, ಪರಿವಾರ ದೇವತೆಗಳು ಈ ದೇವಾಲಯದಲ್ಲಿದ್ದಾರೆ. ಪ್ರತಿ ಸಂಕ್ರಾಂತಿಯಂದು ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸೊದನ್ನ  ನೋಡುವುದೇ ಚಂದ. ಕಳೆದ ವರ್ಷ ವಾತಾವರಣದ ಹಿನ್ನೆಲೆ ಶಿವಲಿಂಗವನ್ನು ಸ್ಪರ್ಷಿಸಿರಲಿಲ್ಲ.  ಇದೇ ಕಾರಣಕ್ಕೆ ರಾಜ್ಯದಲ್ಲಿ ಕರೋನದಂತಹ ಕಪ್ಪು ಛಾಯೆ ಆವರಿಸಿದ್ದು ಸಾವುನೋವುಗಳು ಸಂಭವಿಸಿದ್ದು ಅಂತಾರೆ.  ಈ ಬಾರಿ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೂ ಮಾಧ್ಯಮಗಳ ಮೂಲಕ ದೇವರ ದರ್ಶನ ಪಡೆಯಿರಿ ಅಂತಾರೆ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರು ಸೋಮಸುಂದರ್ ದೀಕ್ಷಿತ್ ಗುರೂಜಿ.

Ads on article

Advertise in articles 1

advertising articles 2

Advertise under the article