ಕಾಸರಗೋಡು:ಆರ್ ಎಸ್ ಎಸ್ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಸರಗೋಡು:ಆರ್ ಎಸ್ ಎಸ್ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಸರಗೋಡು:ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆರ್ ಎಸ್ ಎಸ್ ಕಾರ್ಯಕರ್ತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತ ಅಣಂಗೂರು ಜೆ. ಪಿ ಕಾಲನಿಯ ನಿವಾಸಿ ಜ್ಯೋತಿಷ್ ಕಾಸರಗೋಡು(35) . ಇಂದು ಬೆಳಿಗ್ಗೆ ತನ್ನ ಮನೆ ಸಮೀಪದ ಮರವೊಂದರ ರೆಂಬೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಜ್ಯೋತಿಷ್ ಬೆಳಿಗ್ಗೆ ಮನೆಯವರು ನೋಡಿದಾಗ ಕಾಣೆಯಾಗಿದ್ದ. ಆ ಬಳಿಕ ಹುಡುಕಾಟ ನಡೆಸಿದಾಗ ಈತನ ಮೃತದೇಹ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರಾಥಮಿಕ ಮಾಹಿತಿ ಪ್ರಕಾರ ಆರ್ಥಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು  ತಿಳಿದು ಬಂದಿದೆ ವಿದ್ಯಾನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 ಜ್ಯೋತಿಷ್ ಬಂಗ್ರಗುಡ್ಡೆ ಯ ಸಿನಾನ್, ಸೂರ್ಲು ವಿನ ರಿಷಾದ್, ತಳಂಗರೆಯ ಜೈನುಲ್ ಅಬಿದ್ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿದ್ದ.

Ads on article

Advertise in articles 1

advertising articles 2

Advertise under the article