Mysoure: ಗೊಮ್ಮಟೇಶ್ವರನಿಗೆ ಚಡ್ಡಿ ತೊಡಿಸಿ ಎಂದ ದಿ ನ್ಯೂ ಇಂಡಿಯನ್ ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಅಯೂಬ್ ಅಂದರ್ !(ayub khan arrest)
Sunday, February 13, 2022
ಮೈಸೂರು: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ದಿ ನ್ಯೂ ಇಂಡಿಯನ್ ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಅಯೂಬ್ ಖಾನ್‌ರನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಈ ಒಂದು ಹೇಳಿಕೆ ಜೈನ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.ಸಮುದಾಯದ ಮುಖಂಡರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಪೊಲೀಸರು 295 _A ಸೆಕ್ಷನ್ ಅಡಿ ಅಯೂಬ್ ಖಾನ್‌ನನ್ನ ಬಂಧಿಸಿದ್ದಾರೆ. ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಸದ್ಯ ಅಯೂಬ್ ಖಾನ್ ನಿಗೆ, ಫೆಬ್ರವರಿ-25 ವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ