Mangalore: 3.48 ಕೋಟಿ ರೂ. ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ)ಅಕ್ರಮ ಮಾರಾಟಕ್ಕೆ ಯತ್ನ; 6 ಮಂದಿ ವಶಕ್ಕೆ(ambar Greece)
Tuesday, February 8, 2022
ಮಂಗಳೂರು: ಕೋಟ್ಯಂತರ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್(ತಿಮಿಂಗಿಲದ ವಾಂತಿ) ಅಕ್ರಮ ಮಾರಾಟಕ್ಕೆ ಯತ್ನಿಸಿರುವ ಆರು ಮಂದಿ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ಜಡ್ಕಲ್ ಪೋಸ್ಟ್, ಜಡ್ಕಲ್ ಗ್ರಾಮ ನಿವಾಸಿ ಪ್ರಶಾಂತ್(24), ಬೆಂಗಳೂರು ವೀರಭದ್ರ ನಗರ ಬಿಎಸ್ ಕೆ ಮೂರನೇ ಹಂತ ನಿವಾಸಿ ಸತ್ಯರಾಜ್(32), ಮಂಗಳೂರಿನ ತೆಂಕಡಪದವು ಗ್ರಾಮ ನಿವಾಸಿ ರೋಹಿತ್(27), ಮಂಗಳೂರು ನಗರದ ಅಡೂರು ಗ್ರಾಮ ನಿವಾಸಿ ರಾಜೇಶ್(37), ತೆಂಕಎಡಪದವು ಗ್ರಾಮ ನಿವಾಸಿ, ವಿರೂಪಾಕ್ಷ(37), ಕಾಪು ನಿವಾಸಿ ನಾಗರಾಜ್(31) ಬಂಧಿತ ಆರೋಪಿಗಳು.
ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್ ಗ್ರೀಸ್ ನ್ನು ಆರೋಪಿಗಳು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಬಂಧಿತರಿಂದ 3 ಕೆಜಿ 480 ಗ್ರಾಂ ತೂಕದ 3.48 ಕೋಟಿ ರೂ. ಮೌಲ್ಯದ ಅಂಬರ್ ಗ್ರಿಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಅಂಬರ್ ಗ್ರೀಸ್ ನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ ಎಂಬಾತನಿಂದ ನೀಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.