Mangalore: ಎಟಿಎಂಗೆ ಕನ್ನ ಹಾಕಲು ಯತ್ನಿಸಿದ ಆರೋಪಿ ಅಂದರ್ - ಕೃತ್ಯ CCTV ಯಲ್ಲಿ ಸೆರೆ
Tuesday, February 8, 2022
ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಬಳಿಯಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ ಎಟಿಎಂಗೆ ಕನ್ನ ಹಾಕಲು ಯತ್ನಿಸಿರುವ ಆರೋಪಿ ಬ್ಯಾಂಕ್ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ಪೊಲೀಸ್ ಬಲೆಗೆ ಬಿದ್ದಿದ್ದಾನೆ.ಕೊಪ್ಪಳ ಜಿಲ್ಲೆಯ ಬಾಚನ ಹಳ್ಳಿ ಮೂಲದ ಬೀರಪ್ಪ ಬಂಧಿತ ಆರೋಪಿ.
ನಿನ್ನೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಆರೋಪಿ ಬೀರಪ್ಪ ತೊಕ್ಕೊಟ್ಟು ಬಳಿಯಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಎಟಿಎಂಗೆ ಬಂದಿದ್ದಾನೆ. ಬಳಿಕ ATM ಮಿಷಿನ್ ತೆರೆದು ಹಣ ಕಳವುಗೈಯ್ಯಲು ಯತ್ನಿಸಿದ್ದಾನೆ. ಆದರೆ ಈ ಬಗ್ಗೆ ಜಾಗೃತರಾದ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಯಾವುದೇ ಕಳವು ನಡೆದಿಲ್ಲ. ಅಷ್ಟರಲ್ಲಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬೀರಪ್ಪ ಕನ್ನ ಹಾಕಲು ಯತ್ನಿಸಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.