Mangalore: ಗುಳಿಗ ದೈವದ ಕಟ್ಟೆಯ ಮುಂದೆ ಚಪ್ಪಲಿ ಧರಿಸಿ ದೈವದ ತ್ರಿಶೂಲ ಹಿಡಿದ ಆರೋಪಿ ಪೊಲೀಸ್ ವಶಕ್ಕೆ: ಹಿಂದೂ ಸಂಘಟನೆ ಹೆಸರಿನಲ್ಲಿ ಹಣಕ್ಕಾಗಿ ಬ್ಲಾಕ್ ಮೇಲ್ !arrest
Wednesday, February 2, 2022
ಉಳ್ಳಾಲ: ಗುಳಿಗ ದೈವದ ಕಟ್ಟೆಯ ಮುಂದೆ ಚಪ್ಪಲಿ ಧರಿಸಿ, ತ್ರಿಶೂಲ ಹಿಡಿದು ನಿಂತು ಫೋಟೊ ತೆಗೆದು ಅದನ್ನು ಸ್ಟೇಟಸ್ ಹಾಕಿಕೊಂಡ ಉತ್ತರ ಭಾರತ ಮೂಲದ ಕ್ಷೌರಿಕನೋರ್ವನನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ನಡುವೆ ಹಿಂದು ಸಂಘಟನೆ ಹೆಸರಲ್ಲಿ ಆರೋಪಿಯನ್ನು ಕೆಲವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೊಣಾಜೆ ಸಮೀಪದ ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಆದಿಲ್ ಅಯಾನ್ ಖಾನ್ ವಿಕೃತಿ ಮೆರೆದ ಆರೋಪಿ. ಆಯಾನ್ ಖಾನ್ ಮುಡಿಪು ಬಳಿಯ ಕಂಬಳ ಪದವು ಎಂಬಲ್ಲಿನ ಗುಳಿಗ ದೈವದ ಕಟ್ಟೆಯ ಎದುರು ನಿಂತು ಚಪ್ಪಲಿ ಧರಿಸಿ ದೈವದ ತ್ರಿಶೂಲ ಹಿಡಿದು ನಿಂತು ಫೋಟೊ ತೆಗೆಸಿಕೊಂಡು ತನ್ನ ಮೊಬೈಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ. ಆರೋಪಿ ಒಂದು ತಿಂಗಳ ಹಿಂದೆ ಈ ದುಷ್ಕ್ರತ್ಯವನ್ನು ಎಸಗಿದ್ದು ಇದೀಗ ಆತ ದೈವಕ್ಕೆ ಅಪಚಾರವೆಸಗಿದ ಫೋಟೊ ವೈರಲ್ ಆಗಿದೆ.ಆರೋಪಿ ಆಯಾನ್ ಖಾನನ್ನ ಕೊಣಾಜೆ ಪೊಲೀಸರು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಕೆಲವು ಸ್ಥಳೀಯ ಯುವಕರು ತಾವು ಹಿಂದು ಸಂಘಟನೆಯವರೆಂದು ಹೇಳಿ ದೈವ ನಿಂದನೆಯ ಸ್ಟೇಟಸ್ ಮುಂದಿಟ್ಟು ಕ್ಷೌರಿಕ ಆಯಾನ್ ನನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.