ಮಂಗಳೂರು: ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತಾಡುತ್ತಲೇ ನೇಣಿಗೆ ಕೊರಳೊಡ್ಡಿದ ಪ್ರಿಯತಮೆ
Wednesday, February 23, 2022
ಮಂಗಳೂರು: ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಹೊರವಲಯದ ಕುಂಪಲ ಬಲ್ಯದಲ್ಲಿ ನಡೆದಿದೆ. ಕುಂಪಲ ಬಲ್ಯ ನಿವಾಸಿ 21 ವರ್ಷದ ಹರ್ಷಿತಾ ಮೃತಪಟ್ಟವರು. ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಹರ್ಷಿತಾ ಪತ್ತೆಯಾಗಿದ್ದಾಳೆ.
ಪ್ರಿಯಕರನೊಂದಿಗೆ ಮೊಬೈಲ್ ಸಂಭಾಷಣೆಯಲ್ಲಿದ್ದ ನಡುವೆ ಮುನಿಸಿಕೊಂಡು ನೇಣು ಹಾಕಿಕೊಂಡಿದ್ದಾಳೆ.ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿ ಪ್ರಿಯಕರ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ.ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ ಕೊನೆಯುಸಿರೆಳೆದಿದ್ದಾಳೆ.
ಮೃತ ಹರ್ಷಿತ ಮತ್ತು ಪ್ರಿಯಕರನ ಮಧ್ಯೆ ವಿರಸ ಮೂಡಿದ್ದು ಫೋನಲ್ಲಿ ಮಾತನಾಡುತ್ತಲೇ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಸಾವಿನ ಬಗ್ಗೆ ಪ್ರಿಯಕರನ ಮೇಲೆ ಅನುಮಾನಗಳಿದ್ದು ಉಳ್ಳಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಹರ್ಷಿತ ಪೋಷಕರಿಗೆ ಏಕೈಕ ಮಗಳಾಗಿದ್ದು ಆಕೆಯ ತಂದೆ ಗಂಗಾಧರ್ ಗಾಣಿಗ ಅವರು ಐದು ವರುಷಗಳ ಹಿಂದೆ ಹಾವು ಕಡಿದು ಮೃತ ಪಟ್ಟಿದ್ದರು. ಹರ್ಷಿತ ತಾಯಿ ಗೀತಾ ಅವರನ್ನ ಅಗಲಿದ್ದಾಳೆ.